ಎಸ್. ದಯಾನಂದ ರಾಜಿನಾಮೆ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡಬಳ್ಳಾಪುರದ ಎಸ್. ದಯಾನಂದ ರಾಜಿನಾಮೆ ನೀಡಿದ್ದಾರೆ. ದೊಡ್ಡಬಳ್ಳಾಪುರ ನಗರ ಘಟಕದ ಅಧ್ಯಕ್ಷರ ಮೂಲಕ ಜಿಲ್ಲಾಧ್ಯಕ್ಷರಿಗೆ ರಾಜಿನಾಮೆ ಪತ್ರ ಸಲ್ಲಿಸಿರುವ ಅವರು ತಮ್ಮ ಕಾರ್ಯಾವಧಿಯಲ್ಲಿ ಸಹಕರಿಸಿದ ಪಕ್ಷದ ದೊಡ್ಡಬಳ್ಳಾಪುರ ತಾಲೂಕು, ನಗರ ಘಟಕಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ರಾಜ್ಯ ಘಟಕದ ಎಲ್ಲ ಮುಖಂಡರು, ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಆತ್ಮಸಂತೋಷದಿಂದ ರಾಜಿನಾಮೆ ನೀಡುತ್ತಿರುವುದಾಗಿ ವಿವರಿಸಿದ್ದಾರೆ. ಆದರೆ ರಾಜಿನಾಮೆಗೆ ಸ್ಪಷ್ಟ ಕಾರಣವನ್ನು ಅವರು ಹೇಳಿಲ್ಲ.
'ಸಚಿವರ ಮೇಲೆ ವಿನಾಕಾರಣ ಆರೋಪ'
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಮಾಜಿ ಶಾಸಕ ಎನ್. ನಾಗರಾಜ್ ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗಳನ್ನು ತಿಳಿದುಕೊಳ್ಳಲು ಇನ್ನು 20 ವರ್ಷ ರಾಜಕಾರಣ ಅನುಭವಬೇಕು. ಚುನಾವಣಿಗಾಗಿ ಕಾರ್ಯಕರ್ತರಲ್ಲಿ ಗೊಂದಲು ಮೂಡಿಸಲು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವದು ಸರಿಯಲ್ಲ ಎಂದು ತಾಪಂ ಮಾಜಿ ಉಪಾಧ್ಯಕ್ಷೆ, ಹಾಲಿ ಸದಸ್ಯೆ ಮಂಜುಳಾ ಡಿ.ಟಿ. ವೆಂಕಟೇಶ್ ಆರೋಪಿಸಿದ್ದಾರೆ. ಸೂಲಿಬೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮಾಜಿ ಶಾಸಕ ಎನ್. ನಾಗರಾಜ್ ವಿನಾಕಾರಣ ಬಚ್ಚೇಗೌಡರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಚುನಾವಣೆ ಹತ್ತಿರವಿರುವ ಕಾರಣ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯ ಸರ್ಕಾರದ ಯೋಜನೆಗಳನ್ನು ಕೇಂದ್ರದ್ದು ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಹೊಸಕೋಟೆ ಕ್ಷೇತ್ರಕ್ಕೆ ಶಾಸಕನಾಗಿ ಆಯ್ಕೆಯಾದ ಬಿ.ಎನ್. ಬಚ್ಚೇಗೌಡರು ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾದ ಮೇಲೆ ಕೋಟ್ಯಂತರ ಹಣವನ್ನು ತಾಲೂಕಿಗೆ ತಂದು ಅಭಿವೃದ್ಧಿಗೆ ಬಳಸಿದ್ದಾರೆ. ಎಸ್ಸಿ, ಎಸ್ಟಿ ರು.17.50 ಕೋಟಿ,ಎಸ್ಸಿ, ಎಸ್ಟಿ ಕಾಲೋನಿಗಳ ಅಭಿವೃದ್ಧಿಗೆ ರು.5 ಕೋಟಿ, ಬಿಎಂಆರ್ಡಿಯಿಂದ ರು.8 ಕೋಟಿ, ಸುರ್ವಣ ಗ್ರಾಮ ಯೋಜನೆಯಲ್ಲಿ ರು.7 ಕೋಟಿ, ಲೋಕೋಪಯೋಗಿ ಇಲಾಖೆಯಿಂದ ರು.10 ಕೋಟಿ, ಮುಖ್ಯಮಂತ್ರಿಗಳ ಯೋಜನೆಯಾದ ನಮ್ಮೂರು,ನಮ್ಮರಸ್ತೆ ಯೋಜನೆಯನ್ನು ರು.12 ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿದೆ. ಚಿಂತಾಣಿಯಿಂದ ಕಡಪ ಸಂಪರ್ಕಿಸುವ ರಸ್ತೆಯನ್ನು ರು.140 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕುಡಿಯವ ನೀರಿನ ಸಮಸ್ಯೆ ನಿವಾರಣೆಗಾಗಿ ತಾಲೂಕಿನ ಎಲ್ಲಡೆ ಕಳೆದ 5 ವರ್ಷಗಳಲ್ಲಿ 600ಕ್ಕೂ ಹೆಚ್ಚು ಬೋರ್ವೆಲ್ಗಳನ್ನು ಕೊರೆಯಿಸಲಾಗಿದೆ. ನೀರಿನ ಶೇಖರಣಿಯ ಓವರ್ ಹೆಡ್ ಟ್ಯಾಂಕ್ಗಳನ್ನು ರು.5 ಕೋಟಿ ವೆಚ್ಚದಲ್ಲಿ ಹಲವಡೆ ಕಟ್ಟಿಸಲಾಗಿದೆ. ಇಂಥ ಹತ್ತಾರು ಯೋಜನೆಗಳನ್ನು ಸಚಿವ ಬಚ್ಚೇಗೌಡರು ತಾಲೂಕಿಗೆ ಮಾಡಿದ್ದು, ನಿಜವಾದ ಅಭಿವೃದ್ಧಿ ಬಚ್ಚೇಗೌಡರ ಆವದಿಯಲ್ಲಿ ಆಗಿದೆ. ಈ ವಿಚಾರಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದೆ.ಸಚವರ ಅಭಿವೃದ್ಧಿ ಕೆಲಸಗಳೇ ಚುನಾವಣಿಗೆ ಶ್ರೀರಕ್ಷೆಯಾಗಿದ್ದು, ಮತದಾರರು ಈ ಬಾರಿಯ ಚುನಾವಣಿಯಲ್ಲಿ ಬಚ್ಚೇಗೌಡರ ಕೈಬಿಡುವದಿಲ್ಲ ವಿಶ್ವಾಸ ವ್ಯಕ್ತಪಡಿಸಿದರು.
ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ರಾಮನಗರ: ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಡದಿ ಬಳಿಯ ಮೇಡನಹಳ್ಳಿ ಗ್ರಾಮದ ಮಂಜುನಾಥ(40) ಕೊಲೆಯಾದ ದುರ್ದೈವಿ. ಮಂಗಳವಾರ ಬೆಳಗ್ಗೆ 5.30ರ ಸುಮಾರಿಗೆ ಬಿಡದಿಯ ಹೌಸಿಂಗ್ ಬೋರ್ಡ್ ಬಳಿ ವಾಯು ವಿಹಾರಕ್ಕಾಗಿ ಆಗಮಿಸಿದ್ದರು. ಈ ವೇಳೆ 7-8 ಮಂದಿ ದುಷ್ಕರ್ಮಿಗಳ ತಂಡ ಲಾಂಗ್, ಮಚ್ಚಿನಿಂದ ತೀವ್ರವಾಗಿ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ. ಹಲ್ಲೆಯಿಂದ ಕುಸಿದು ಬಿದ್ದ ಮಂಜುನಾಥ್ ತೀವ್ರ ರಕ್ತಸ್ರಾವವಾದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.