ಕಾಮನ ಗುಡಿಯಲ್ಲಿ ಹೋಳಿ ಹಬ್ಬ
ಮಾಗಡಿ: ಮಾಗಡಿ ಪಟ್ಟಣದ ತಿರುಮಲೆ ಕಾಮನ ಗುಡಿಯಲ್ಲಿ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೋಳಿ ಹಬ್ಬದ ಪ್ರಯಕ್ತ ಕಾಮದಹನ ನಡೆಯಿತು. ಯುವಕರು ಸಂಭ್ರಮದಿಂದ ಒಬ್ಬರಿಗೊಬ್ಬರು ಹೋಳಿ ಬಣ್ಣ ಹಾಕುವ ಮೂಲಕ ಸಂಭ್ರಮಿಸಿದರು. ಹೋಳಿ ಹಬ್ಬದ ಅಂಗವಾಗಿ ತಮಟೆ ವಾದ್ಯದೊಂದಿಗೆ ಮನೆ ಮನೆಗೆ ತೆರಳಿ ಹೋಳಿ ಬಣ್ಣ ಹಾಕುವ ಮೂಲಕ ಕಾಮದಹನದ ಸಂದೇಶ ನೀಡಿದರು.
ಕಸ್ತೂರಿ ಕಿರಣ್ಕುಮಾರ್ , ದಯಾನಂದ, ಮೂರ್ತಿ, ಮಹೇಶ್, ರಾಜು, ನಾಗರಾಜು ಸೇರಿದಂತೆ ಅನೇಕ ಯುವಕರು, ಮಕ್ಕಳು ಸೇರಿದಂತೆ ಗ್ರಾಮದ ಜನ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.