ಜನಪರ ಯೋಜನೆ ಜಾರಿಗೊಳಿಸಿದ ಬಿಜೆಪಿ ಸರ್ಕಾರ: ನಾರಾಯಣಸ್ವಾಮಿ
ಕ.ಪ್ರ.ವಾರ್ತೆ ಆನೇಕಲ್ ಮಾ.26
ಸಾಕಷ್ಟು ಅಡತಡೆಗಳ ನಡುವೆಯೂ ಆಡಳಿತ ಚುಕ್ಕಾಣಿ ಹಿಡಿದು ಪೂರ್ಣ ಅವಧಿ ಮುಗಿಸಿದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಮುಗಳೂರಿನಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಕಳೆದ ಬಾರಿ ಪಕ್ಷೇತರರನ್ನು ಸೇರ್ಪಡೆ ಮಾಡಿಕೊಂಡು ಸರ್ಕಾರ ರಚಿಸಿತು. ಈ ಬಾರಿ ಬಿಜೆಪಿಯೇ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು. ಹಿಂದಿನ ಸರ್ಕಾರಗಳು ಸಾಧನೆ ಮಾಡಲಾಗದೆ ಇರುವ ಅನೇಕ ಕೆಲಸಗಳನ್ನು ಮಾಡಿದೆ. ತಾಲೂಕಿನಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿದ ಜನರ ವಿಶ್ವಾಸವನ್ನು ಈ ಬಾರಿಯೂ ಗೆಲ್ಲಲು ಪ್ರಯತ್ನ ಮಾಡುವುದಾಗಿ ಹೇಳಿದರು. ಎಲ್ಲಾ ಸಮುದಾಯಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಪೂರೈಸುವುದಾಗಿ ಆಶ್ವಾಸನೆ ನೀಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಎನ್. ಬಸವರಾಜು ಮಾತನಾಡಿ ಇಲ್ಲದ ಸಲ್ಲದ ಗಾಳಿಮಾತಿಗೆ ಕಾರ್ಯಕರ್ತರು ಕಿವಿಗೊಡಬೇಡಿ. ಒಗ್ಗಟ್ಟಿನಿಂದ ತಾಲೂಕಿನಲ್ಲಿ ಶ್ರಮಿಸಿದರೆ ಬಿಜೆಪಿಯ ಭದ್ರ ಕೋಟೆಯಾಗಿರುವ ಆನೇಕಲ್ ತಾಲೂಕನ್ನು ಯಾರು ಭಿನ್ನಮಾಡಲಾರರು ಎಂದರು. ಕೆ.ವಿ.ಶಿವಪ್ಪ ಮಾತನಾಡಿದರು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿಯ ಜನಪರ ಕಾರ್ಯಗಳನ್ನು ತಿಳಿಯಪಡಿಸಬೇಕೆಂದು ಕೋರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.