ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾರ್ಯಕರ್ತರಿಂದ ಜೆಡಿಎಸ್ ಮುಖಂಡನಿಗೆ ಹಲ್ಲೆ; ದೂರು

Rashmi Kasaragodu
Updated On : 30 Mar 2013, 11:19 am

ಕ.ಪ್ರ.ವಾರ್ತೆ   ನೆಲಮಂಗಲ   ಮಾ.29
ತಾಲೂಕಿನ ಜೆಡಿಎಸ್ ಮುಖಂಡ ವೆಂಕಟೇಶ್ಬಾಬು ರವರನ್ನು ತಮ್ಮ ಪಕ್ಷದ ಕಾರ್ಯಕರ್ತರೇ ಅಡ್ಡಗಟ್ಟಿ ಹಲ್ಲೆ ನಡೆಸಿರುವ ಪ್ರಕರಣ ಗುರುವಾರ ರಾತ್ರಿ ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಸಿದ್ದಯ್ಯನ ಪಾಳ್ಯದ ಬಳಿ ನಡೆದಿದೆ.
ಕಳೆದ ಗುರುವಾರ ರಾತ್ರಿ ಸಿದ್ದಯ್ಯನ ಪಾಳ್ಯದ ಗ್ರಾಮದಲ್ಲಿ ನಡೆದ ನಾಟಕ ಕಾರ್ಯಕ್ರಮ ಮುಗಿಸಿಕೊಂಡು ಚಾಲಕನೊಂದಿಗೆ ವೆಂಕಟೇಶ್ ಬಾಬು ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ತಾಲೂಕಿನ ಜೆಡಿಎಸ್ ಕಾರ್ಯಕರ್ತರಾದ ಶಂಕರ, ರಂಗಸ್ವಾಮಿ ಹಾಗೂ ಬೆಂಬಲಿಗರು ಕಾರನ್ನು ಅಡ್ಡಗಟ್ಟಿ ಅವರನ್ನು ಕರೆದು ನೆಲಮಂಗಲ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಬಾರದು, ದೇವೇಗೌಡರ ಮನೆಗೆ ಹೋಗಬಾರದು ಎಂದು ಧಮಕಿ ಹಾಕಿ ಶರ್ಟ್ ಅರಿದು ಹೊಡೆದಿದ್ದಾರೆ. ಈ ಸಂಬಂಧ ವೆಂಕಟೇಶ್ಬಾಬು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವೆಂಕಟೇಶ್ಬಾಬು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ  ವೆಂಕಟೇಶ್ಬಾಬು ಆರೋಗ್ಯ ಸ್ಥಿತಿ ವಿಚಾರಿಸಲು ತಾಲೂಕಿನಿಂದ ಸಾವಿರಾರು ಜನ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement