ಚನ್ನಪಟ್ಟಣ: ಮದುವೆ ಮುಗಿಸಿ ಕೊಂಡು ಹಿಂತಿರುಗುತ್ತಿದ್ದ ಮಹಿಳೆಯೊಬ್ಬರ ಸರ ಕಳವು ಮಾಡಿರುವ ಘಟನೆ ತಾಲೂಕಿನ ವಂದಾರಗುಪ್ಪೆ ಕೆರೆ ಸಮೀಪ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ವಂದಾರಗುಪ್ಪೆ ಗ್ರಾಮದ ಲಕ್ಷ್ಮಮ್ಮ ಎಂಬುವರ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಲಕ್ಷ್ಮಮ್ಮ ತಮ್ಮ ಸಹೋದರಿ ಮಾಯಮ್ಮ ಎಂಬುವರ ಜತೆ ಕೆಂಗಲ್‌ನಲ್ಲಿ ನಡೆದ ವಿವಾಹ ಮುಗಿಸಿಕೊಂಡು ಸ್ವಗ್ರಾಮಕ್ಕೆ ಕೆರೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಲಕ್ಷ್ಮಮ್ಮರ ಕುತ್ತಿಗೆಯಲ್ಲಿದ್ದ ಸರ ಕಸಿದಿದ್ದಾರೆ.
ಪ್ರತಿರೋಧ ವ್ಯಕ್ತಪಡಿಸಿದ ಲಕ್ಷ್ಮಮ್ಮಗೆ ಕಲ್ಲಿನಿಂದ ಹೊಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.