ಅಭಿವೃದ್ಧಿಯೇ ಬಿಜೆಪಿ ಗೆಲವಿಗೆ ಶ್ರೀರಕ್ಷೆ: ಪ್ರಧಾನ್
ಹೆಬ್ಬಗೋಡಿ: ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭಿವೃದ್ಧಿ ಪರ ಜನಾಭಿಪ್ರಾಯ ಮತ್ತೆ ಮೂಡಲಿದ್ದು, ಈ ನಿಟ್ಟಿನಲ್ಲಿ ಶಾಸಕ ಸತೀಶ್ ರೆಡ್ಡಿ ಮತ್ತೆ ಮೇಲುಗೈ ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ರೆಡ್ಡಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೈಗಾರಿಕೆ ಪ್ರದೇಶವೇ ಅತಿ ಹೆಚ್ಚಾಗಿರುವ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಐದು ವರ್ಷಗಳ ಹಿಂದೆ ಇಲ್ಲಿ ಅಗತ್ಯವಾಗಿ ಬೇಕಿದ್ದ ಸೌಕರ್ಯಗಳಿಂದ ಇಲ್ಲಿನ ನಾಗರಿಕರು ವಂಚಿತರಾಗಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ, ಶಾಸಕ ಸತೀಶ್ ರೆಡ್ಡಿ ಈ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗಿಸಿದ್ದಾರೆ. ಈ ನಿಟ್ಟಿನಲ್ಲಿ ಇದೆ ಬಿಜೆಪಿ ಗೆಲವಿಗೆ ಶ್ರೀರಕ್ಷೆ. ಜನರು ಅವರ ಕೈಬಿಡುವುದಿಲ್ಲ ಎಂದರು. ಇದೇ ವೇಳೆ ಜೆಡಿಎಸ್ ಮುಖಂಡ ಗಣೇಶ್ ನೇತೃತ್ವದಲ್ಲಿ ಕುಮಾರ್, ವಿಜಯ್, ದೇವರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಅಲ್ಲದೆ, ಕಾಂಗ್ರೆಸ್ನ ಪ್ರಮುಖ ನಾಯಕ ಎ.ಬಿ. ಲೋಕೇಶ್ ತಮ್ಮ ಬೆಂಬಲಿಗರೊಂದಿಗೆ ಶಾಸಕ ಸತೀಶ್ರೆಡ್ಡಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿಕೊಂಡರು.