ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಎಚ್‌ಡಿಕೆಯಿಂದ ಮಾತ್ರ ಸುವರ್ಣಯುಗ ಸಾಧ್ಯ'

Rashmi Kasaragodu
Updated On : 2 May 2013, 11:53 am

ಮಾಗಡಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ರಾಜ್ಯದಲ್ಲಿ ಸುವರ್ಣಯುಗ ಸಾಧ್ಯವಿದೆ ಎಂದು ಜಿ.ಪಂ. ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ನುಡಿದರು.  ಅವರು ಶಾನಭೋಗನಹಳ್ಳಿಯಿಂದ ನೂರಾರು ಬೈಕ್ ರ್ಯಾಲಿ  ಮೂಲಕ ಜೆಡಿಎಸ್  ಅಭ್ಯರ್ಥಿ ಎಚ್.ಸಿ.  ಬಾಲಕೃಷ್ಣ ಅವರ ಪರ ಮತಯಾಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ  5 ವರ್ಷ ಎಚ್‌ಡಿಕೆ ಸಿಎಂ ಮಾಡಿದರೆ ಸುವರ್ಣ ಯುಗ ಕಾಣಬಹುದು, ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಜೆಡಿಎಸ್  ಅಭ್ಯರ್ಥಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ನಿಮ್ಮೆಲ್ಲರ ಮತ ಅಗತ್ಯವಿದೆ ಎಂದರು.  ಇದೇ ಸಂದರ್ಭದಲ್ಲಿ ಶಾನಭೋಗನಹಳ್ಳಿಯಲ್ಲಿ ಮನೆ, ಮನೆಗೆ ತೆರಳಿದ ಮುದ್ದುರಾಜ ಯಾದವ್ ಹಾಗೂ ಇತರೆ ಕಾರ್ಯಕರ್ತರು  ಎಚ್.ಸಿ. ಬಾಲಕೃಷ್ಣ ಪರ ಮತಯಾಚಿಸಿದರು. ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ರಂಗನಾಥ್, ಮೂರ್ತಿ, ಮಾರುತಿ ಯಾದವ್, ವಿಜಯಕುಮಾರ್, ವೆಂಕಟೇಶ್, ಗೋವಿಂದಪ್ಪ, ರಾಜು, ಶಿವಣ್ಣ, ಸೇರಿದಂತೆ ನೂರಾರು ಕಾರ್ಯಕರ್ತರು  ಬೈಕ್  ರ್ಯಾಲಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement