ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣದ ಮೇಲಿನ ಮಮತೆಯಿಂದ ಸ್ಪರ್ಧೆ

Mainashree
Updated On : 2 May 2013, 12:31 pm

ಚನ್ನಪಟ್ಟಣ :ಸೋಲಿನ ಭೀತಿಗೆ ಸಿಲುಕರುವರುವ ನನ್ನ ರಾಜಕೀಯ ಎದುರಾಳಿಗಳು ನನ್ನ ವಿರುದ್ಧ ಅನಗತ್ಯವಾಗಿ ಟೀಕೆ ಮಾಡುತ್ತಿದ್ದು  ನಾನು ಚನ್ನಪಟ್ಟಣದ ಮೇಲಿನ ಮಮತೆಯಿಂದಾಗಿ ಈ ಕ್ಷೇತ್ರಕ್ಕೆ ಬಂದೆನೆ ವಿನಾ, ಅವರು ಅಪಪ್ರಚಾರ ಮಾಡುತ್ತಿರುವಂತೆ ಸೋಲಿನ ಭೀತಿಯಿಂದಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಸ್ಪಷ್ಟೀಕರಿಸಿದ್ದಾರೆ.
ಈ ಕುರಿತು  ಹೇಳಿಕೆ ನೀಡಿರುವ ಅವರು,  ನಾನು ಮಧುಗಿರಿ ಕ್ಷೇತ್ರದಿಂದ ಅನಿವಾರ್ಯವಾಗಿ ಚುನಾವಣೆಗೆ ಸ್ಪರ್ದಿಸಬೇಕಾದ ಅವಶ್ಯಕತೆ ಇತ್ತು. ಅಂದಿನ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಬಲತುಂಬಬೇಕಾದರೆ ನನ್ನ ಸ್ಪರ್ಧೆ ಅವಶ್ಯಕತೆ ಇದೆ ಎಂದು ಮಧುಗಿರಿ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಹೇಳಿದ್ದರಿಂದ ನಾನು ಸ್ಪರ್ಧಿಸಿ ಆ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಗೆಲವಿನ ನಗೆಬೀರಿದ್ದೆ. ಮಂದಿನ ಚುನಾವಣೆಯಲ್ಲಿ ಮಧುಗಿರಿಯವರೇ ಆದ ವೀರಭದ್ರಯ್ಯನವರಿಗೆ ಅವಕಾಶ ಮಾಡಿಕೊಡುವುದಾಗಿ ನಾನು ಮತ್ತು ಹೆಚ್.ಡಿ.ಕುಮಾರಸ್ವಾಮಿಯವರು ಆ ಕ್ಷೇತ್ರದ ಮತದಾರರಿಗೆ ವಾಗ್ದಾನ ನೀಡಿದ್ದೆವು. ಅದರಂತೆ ನಾನು ಕ್ಷೇತ್ರವನ್ನು ಅವರಿಗೆ ಬಿಟ್ಟು ಕೊಟ್ಟು ಈಕ್ಷೇತ್ರಕ್ಕೆ ಆಗಮಿಸಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಕುಟುಂಬದ ಕರ್ಮಭೂಮಿಯಾಗಿರುವ ಈ ಕ್ಷೇತ್ರದಲ್ಲಿ ನಾನು ಬೆಳೆದಿದ್ದು, ಹಿಂದಿನಿಂದಲೂ ನಾನು ಈ ಕ್ಷೇತ್ರದ ಬಗ್ಗೆ ಒಲವು ತೋರಿದ್ದೆ,  ಇಲ್ಲಿನ ಕಾರ್ಯಕರ್ತ ಒತ್ತಾಸೆ ಹೆಚ್ಚಾದ ಕಾರಣ ಸ್ಪರ್ಧಿಸಬೇಕೆಂದು ನಾನು ಚಿಂತನೆ ನಡೆಸಿದ್ದೆ. ನಮ್ಮ ಪಕ್ಷದ ಹಿರಿಯ ಮುಖಂಡರ ಒಲವು  ತೋರಿಸಿದ ಹಿನ್ನೆಲೆಯಲ್ಲಿ ಈಕ್ಷೇತ್ರದಿಂದ ನಾನು ಕಣಕ್ಕಿಳಿದಿದ್ದು, ಕೆಲ ಮಂದಿ ಹೇಳುತ್ತಿರುವಂತೆ ನಾನು ಸೋಲಿನ ಭೀತಿಯಿಂದ  ಇಲ್ಲಿಗೆ ಬಂದಿಲ್ಲ ಎಂದು ಪುನರಚ್ಚರಿಸಿದ್ದಾರೆ. ಕ್ಷೇತ್ರದ ಮತದಾರರ ಆಶೀರ್ವಾದ ನನಗೆ ದೊರೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದ್ದರಿಂದ ಹತಾಶರಾಗಿರುವ ವಿರೋಧಿಗಳು ತಮ್ಮ ವಿಕೃತಿತನವನ್ನ ಅನಾವರಣ ಮಾಡಿಕೊಂಡು ತಮ್ಮ ವಿಲಕ್ಷಣವಾದ ಮನಸ್ಥಿತಿಯಿಂದ ಮಾತನಾಡುತ್ತಿದ್ದಾರೆ. ಅತೃಪ್ತ ಮತ್ತು ಹತಾಶ ಮನಃಸ್ಥಿತಿಯ ಕೊನೆಯ ಹಂತತಲುಪಿರುವ ರಾಜಕೀಯ ವಿರೋಧಿಗಳಿಗೆ ಕ್ಷೇತ್ರದ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ತಂದೆ ತಾಯಂದಿರು ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement