ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಡವರಿಗೆ ಸೌಲಭ್ಯ ದೊರಕಿಸುವುದೇ ಜೆಡಿಎಸ್ ಗುರಿ'

Rashmi Kasaragodu
Updated On : 2 May 2013, 12:09 pm

ನೆಲಮಂಗಲ: ಗ್ರಾಮೀಣ ಭಾಗದ ಬಡ ಜನತೆಗೆ ಸಿಗಲೇಬೇಕಾದಂತಹ ಸೌಲಭ್ಯಗಳನ್ನು ದೊರಕಿಸುವುದೇ ಜೆಡಿಎಸ್ ಗುರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಹೇಳಿದರು.
ಅವರು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕ್ಷೇತ್ರದ ಜೆಡಿಎಸ್  ಅಭ್ಯರ್ಥಿ ಡಾ.ಕೆ. ಶ್ರೀನಿವಾಸಮೂರ್ತಿ ಪರ ಮನೆಮನೆ ಬಾಗಿಲಿಗೆ ತೆರಳಿ ಮತಯಾಚಿಸಿ ಮಾತನಾಡಿ, ತಾಲೂಕಿನ ವರ್ತಕರಿಗೆ, ರೈತರಿಗೆ ಹಾಗೂ ಕೂಲಿಕಾರ್ಮಿಕರ ಕಷ್ಚಸುಖಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ರಾಜ್ಯವನ್ನಾಳಿದ ರಾಷ್ಟ್ರೀಯ ಪಕ್ಷಗಳು ಗ್ರಾಮೀಣ ಭಾಗವನ್ನು ಕಡೆಗಣಿಸಿವೆ.
ರೈತರಿಗಾಗಿ ಅಗತ್ಯವಿರುವ ನೀರಾವರಿ ಯೋಜನೆ ಇಲ್ಲದಿರುವ ಕ್ಷೇತ್ರಕ್ಕೆ ಈ ಬಾರಿ ತಮಗೆ ಜನತೆ ಆಶೀರ್ವದಿಸಿದರೆ ಕೂಡಲೇ ಶಾಶ್ವತ ನೀರಾವರಿ ಕಲ್ಪಿಸಲು ಶ್ರಮಿಸುವುದಾಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಮತದಾರರಲ್ಲಿ ಮನವಿ ಮಾಡಿದರು.
ಮುಖಂಡರಾದ ಜಿ.ಪಂ.ಸದಸ್ಯ ಕಾಂತರಾಜು, ಗಂಗಣ್ಣ, ಬಿ.ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ,ಬೂದಿಹಾಲ್‌ರಾಜು , ಲೋಕೇಶ್, ಪುರಸಭಾ ಸದಸ್ಯರಾದ ಎ. ಪಿಳ್ಳಪ್ಪ, ಎನ್.ಪಿ. ಹೇಮಂತ್ ಕುಮಾರ್, ಶಿವಕುಮಾರ್, ಗಣೇಶ್, ಎಚ್.ಜಿ.ರಾಜು ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement