ಮಾಗಡಿ ಕ್ಷೇತ್ರ ಬಿಟ್ಟು ತಪ್ಪು ಮಾಡಿದೆ: ರೇವಣ್ಣ
ಕ.ಪ್ರ. ವಾರ್ತೆ ಮಾಗಡಿ ಮೇ 1
ಪ್ರಮಾಣ ಮಾಡಿ ಹೇಳುತ್ತೇನೆ, ಮಾಗಡಿ ಕ್ಷೇತ್ರ ಬಿಟ್ಟು ತಪ್ಪು ಮಾಡಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಅವರು ಕುದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಮತಯಾಚಿಸಿ ಮಾತನಾಡುತ್ತಾ ನಾನು ಕ್ಷೇತ್ರ ಜನತೆಯನ್ನು ಸಹೋದರತ್ವದಿಂದ ಕಾಣುತ್ತಿದ್ದೆ. ಜನತೆಯೂ ಸಹ ನನ್ನನ್ನು ಮಾಗಡಿ ರೇವಣ್ಣ ಎಂದೇ ಕರೆಯುತ್ತಿದ್ದರು.
ನಾನು ಕ್ಷೇತ್ರ ಬಿಡಲು ಕೆಜೆಪಿ ಅಭ್ಯರ್ಥಿಯಾಗಿರುವ ಎಚ್.ಎಂ. ಕೃಷ್ಣಮೂರ್ತಿ ಕಾರಣ ಎಂದು ನೇರ ಆರೋಪ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಮಾತನಾಡಿ ಈ ಬಾರಿ ನನ್ನನ್ನು ಬಹುಮತದಿಂದ ಆಯ್ಕೆ ಮಾಡಿದರೆ ಕ್ಷೇತ್ರಕ್ಕೆ ಹೇಮಾವತಿ ನೀರು ಹರಿಸಲು ಎಚ್.ಎಂ. ರೇವಣ್ಣ ಅವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಚಿಗಳೂರು ಗಂಗಾಧರ್, ಬಿ.ಎಸ್.ಕುಮಾರ್, ಬಿ.ಎಸ್.ಸುಹೇಲ್, ನಾರಾಯಣಪ್ಪ, ಜಾವಿದ್, ಯತಿರಾಜು, ಗಿರಿಯಣ್ಣ,ಪಿ. ನಾಗರಾಜು, ಬಾಲರಾಜು ಇತರರು ಇದ್ದರು.