ಮುತ್ತಪ್ಪ ರೈ ಪತ್ನಿ ಅಂತ್ಯಕ್ರಿಯೆ
ರಾಮನಗರ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಂಗಾಪುರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಪತ್ನಿ ರೇಖಾ ಅವರ ಅಂತ್ಯಕ್ರಿಯೆ ರೈ ಅವರ ಬಿಡದಿಯ ಫಾರ್ಮ್ ಹೌಸ್ ಬಳಿ ಬುಧವಾರ ನೇರವೇರಿತು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೇಖಾ ಮುತ್ತಪ್ಪರೈ ಅವರನ್ನು ಸಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಏ.28ರಂದು ಮಣತಪಟ್ಟಿದ್ದರು. ವಿಮಾನದಲ್ಲಿ ಶವವನ್ನು ಫಾರ್ಮ್ ಹೌಸ್ಗೆ ತಂದು, ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಚಿತ್ರನಟ ವಿನೋದ್ ಆಳ್ವ, ನಟಿ ದುನಿಯಾ ರಶ್ಮಿ ಸೇರಿದಂತೆ ಅನೇಕ ಗಣ್ಯರು, ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು, ಮುತ್ತಪ್ಪ ರೈ ಬಂಧುಗಳು ಅಂತಿಮ ದರ್ಶನ ಪಡೆದರು.