ಸುಟ್ಟು ಕರಕಲಾದ ಲಾರಿ ಎಂಜಿನ್
ಹುಳಿಯಾರು: ಬಸ್ ನಿಲಾಣದಲ್ಲಿ ನಿಲ್ಲಿಸಿದ್ದ 16 ಚಕ್ರದ ಲಾರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಾರಿಯ ಕ್ಯಾಬಿನ್ ಭಾಗ, ಎಂಜಿನ್ ಹಾಗೂ ಟೈರ್ಗಳು ಮಾತ್ರ ಸುಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಘಟಿಸಿದೆ. ರಾಜಸ್ಥಾನಕ್ಕೆ ಸೇರಿದ ಲಾರಿ ಮಂಗಳೂರಿನಿಂದ ಆಂಧ್ರದ ಅನಂತಪುರಕ್ಕೆ ಕಲ್ಲಿದ್ದಲ ಪುಡಿಯನ್ನು ಹೊತ್ತೊಯುತ್ತಿದ್ದು, ಟೀ ಕುಡಿಯಲೆಂದು ಡ್ರೈವರ್ ಹಾಗೂ ಕ್ಲಿನರ್ ಲಾರಿ ನಿಲ್ಲಿಸಿ ತೆರಳಿದಾಗ ಈ ಘಟನೆ ನಡೆದಿದೆ. ತಕ್ಷಣವೇ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.