'ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆಲಸ ಮಾಡಿಲ್ಲ'
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ರಾಗಿ ಕಾಳಿನಷ್ಟು ಕೆಲಸವಾಗಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಹೇಳಿದ್ದಾರೆ.
ಸೂಲಿಬೆಲೆಯಲ್ಲಿ ಬುಧವಾರ ಸಂಜೆ ರೋಡ್ ಶೋ ನಡೆಸಿದ ಅವರು, ಕಳೆದ 5ವರ್ಷಗಳಲ್ಲಿ ಸೂಲಿಬೆಲೆ ಪಟ್ಟಣವನ್ನು ರು.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡೆಸಿದ್ದಲ್ಲದೇ, ಪದವಿ ಕಾಲೇಜು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, 2 ಎಕರೆ ಪ್ರದೇಶದಲ್ಲಿ ರು.3 ಕೋಟಿ ವೆಚ್ಚದಲ್ಲಿ ಐಟಿಐ ಸ್ಥಾಪನೆ, ಕಾಲೇಜು ಹೆಚ್ಚುವರಿ ಕೊಠಡಿಗಳಿಗೆ ರು.75 ಲಕ್ಷ ಹಣ, ಅಲ್ಪ ಸಂಖ್ಯಾತರ ಕಲ್ಯಾಣ ಅಭಿವೃದ್ಧಿಗೆ ಶಾದಿ ಮಹಲ್, ವಾಲ್ಮೀಕಿ ಮತ್ತು ಅಂಬೇಡ್ಕರ್ ಭವನಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದಕ್ಕೂ ಮುನ್ನ ವಾಲ್ಮೀಕಿನಗರ, ಅಂಬೇಡ್ಕರ್ ಕಾಲೊನಿ, ಸಾಬಿಬಾಬಾ ಬೀದಿ, ಮೂಲಕ ರೋಡ್ ಶೋ ನಡೆಸಿ ಹಳೇ ಬಸ್ ನಿಲ್ದಾಣದಿಂದ ಸಾಗಿ ಜನತಾ ಕಾಲೋನಿಯಲ್ಲಿ ಸೇರಿದ್ದ ಅಪಾರ ಸಂಖ್ಯೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಬಿ.ಎನ್. ಗೋಪಾಲಗೌಡ, ಸತೀಶ್ ಗೌಡ, ನಾರಾಯಣಗೌಡ, ಜನಾರ್ದನ್ ರೆಡ್ಡಿ, ಬಾಜಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.