ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ

Rashmi Kasaragodu
Updated On : 3 May 2013, 1:01 am

ಕ.ಪ್ರ.ವಾರ್ತೆ    ರಾಮನಗರ    ಮೇ 2
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸರ್ವಜನಾಂಗಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನವನ್ನು ರಚಿಸಿದ ಸಾಮಾಜಿಕ ನ್ಯಾಯದ ಹರಿಕಾರ ಎಂದು ಉರಿಲಿಂಗಪೆದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಜ್ಞಾನ ಪ್ರಕಾಶ್ ಸ್ವಾಮೀಜಿ ತಿಳಿಸಿದರು.
ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಸಂಘ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜನ್ಮ ದಿನೋತ್ಸವ ಹಾಗೂ ಎಲೆಕೇರಿ ಡಿ.ರಾಜಶೇಖರ್ ಅವರ ಕವನ ಪುಷ್ಪ
ಜೈ ಭೀಮ್ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್  ಹೆಣ್ಣು ಮಕ್ಕಳಿಗೆ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದರು. ಹಾಗೆಯೇ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸಿದ ಮಾನವತೆಯ ಪ್ರತಿಪಾದಕ ಎಂದರು.
ಸಾಹಿತಿ ಎಲೆಕೇರಿ ಡಿ.ರಾಜಶೇಖರ್ ರಚಿಸಿರುವ ಜೈ ಭೀಮ್ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪಿ.ಜೆ.ಗೋವಿಂದರಾಜ್ ಮಾತನಾಡಿದರು. ವಿಜಯ್ ರಾಂಪುರ, ಬಿ.ಪಿ.ಸುರೇಶ್, ಡಾ.ಅಕ್ರಂ ಪಾಷಾ, ಚಿಕ್ಕರಾಮಯ್ಯ, ಹನುಮಯ್ಯ, ಸಿಂಗ್ರಯ್ಯ, ತಮ್ಮಣ್ಣ, ಪಾಪಣ್ಣ, ದೇವರಾಜು, ರಾಮಯ್ಯ, ಸೋಮಶೇಖರ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement