ಅಭಿವೃದ್ಧಿ ಮರೀಚಿಕೆ: ಬಿಎಸ್ಪಿ ಆರೋಪ
ಕ.ಪ್ರ.ವಾರ್ತೆ ಕನಕಪುರ ಮೇ 2
ಸಾತನೂರು ಹಾಗೂ ಕನಕಪುರ ಕ್ಷೇತ್ರಗಳ ಅತಿರಥ, ಮಹಾರಥರೆನಿಸಿಕೊಂಡಿರುವ ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವಧಿಯ ಎರಡೂವರೆ ದಶಕಗಳಲ್ಲಿ ತಾಲೂಕಿನ ಅಭಿವೃದ್ಧಿ ಮರಿಚಿಕೆಯಾಗಿಯೇ ಉಳಿದಿದೆ.
ಡಾ.ನಂಜುಂಡಪ್ಪ ವರದಿಯಲ್ಲಿ ತಾಲೂಕು ಅತಿ ಹಿಂದುಳಿಯಲು ಈ ಇಬ್ಬರೇ ಕಾರಣ ಎಂದು ಬಿಎಸ್ಪಿ ಅಭ್ಯರ್ಥಿ ಮಲ್ಲಿಕಾರ್ಜುನ ದೂರಿದ್ದಾರೆ. ಅವರು ದೊಡ್ಡಾಲಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು.