ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆ
ದೇವನಹಳ್ಳಿ: ತಾಲೂಕು ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡರು ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ರಾಜಣ್ಣರವರ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಆಲೂರು ದುದ್ದನಹಳ್ಳಿಯ ಹಾಲು ಡೇರಿ ಅಧ್ಯಕ್ಷರಾದ ಡಿ.ಎನ್.ಮುನಿರಾಜು, ಮಾಜಿ ಅಧ್ಯಕ್ಷರಾದ ಡಿ.ಕೆ.ಆನಂದಮೂರ್ತಿ, ಅಂಗಡಿ ಮುನಿರಾಜು, ವಿ.ಬಿಸೇಗೌಡ, ಮೈಸೂರು ಆಂಜಿನಪ್ಪ ಹಾಗೂ ಇತರ ಪ್ರಮುಖ ಗ್ರಾಮಸ್ಥರು ಗುರುವಾರ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ ಎಂದು ಬಿ.ರಾಜಣ್ಣ ತಿಳಿಸಿದರು.