ಡಿ.ಕೆ. ಶಿವಕುಮಾರ್ ಪರ ಪ್ರಚಾರ
ಕ.ಪ್ರ.ವಾರ್ತೆ ಕನಕಪುರ ಮೇ 2
ಅಖಿಲ ಕರ್ನಾಟಕ ಡಿಕೆಶಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಮಲ್ಲಪ್ಪ ಎಸ್.ಅಂಗಡಿ ನೇತೃತ್ವದಲ್ಲಿ ಕನಕಪುರ ವಿಧಾನಸಭಾ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಸಕ ಶಿವಕುಮಾರ್ ಅವರಿಗೆ ಮತ ನೀಡಬೇಕೆಂದು ಕೋರಿ ಪ್ರಚಾರ ನಡೆಸಿದರು.
ಕನಕಪುರ ಕ್ಷೇತ್ರದಲ್ಲಿ ಪ್ರಶ್ನಾತೀತ ನಾಯಕರಾಗಿರುವ ಶಿವಕುಮಾರ್ ಅವರು ತಮ್ಮ ಕಾರ್ಯಕ್ಷಮತೆ, ದಕ್ಷತೆ ಹಾಗೂ ಸಂಘಟನಾ ಮನೋಭಾವದಿಂದ ರಾಜ್ಯಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಕನಕಪುರದ ಅಪೂರ್ವ ಅಭಿವೃದ್ಧಿಗೂ ತಮ್ಮದೇ ಆದ ಶೈಲಿಯಲ್ಲಿ ಕೊಡುಗೆ ನೀಡಿರುವ ಶಿವಕುಮಾರ್ ರಾಜ್ಯ ಭವಿಷ್ಯದ ರಾಜಕಾರಣದ ಆಶಾಕಿರಣವಾಗಿದ್ದಾರೆ. ಅವರ ಗೆಲವು ರಾಜ್ಯದ ಅಭಿವೃದ್ಧಿಯ ಮುನ್ಸೂಚನೆಯಾಗಲಿದೆ ಎಂದು ಅಂಗಡಿ ತಿಳಿಸಿದ್ದಾರೆ. ಪ್ರಚಾರದಲ್ಲಿ ಉದ್ಯಮಿ ಪ್ರಕಾಶ್ ಗೌಡ, ವೀರಶೈವ ಪರಿಷತ್ ಕಾರ್ಯದರ್ಶಿ ಪ್ರಭು, ಸಿ.ರಾಜೇಂದ್ರ ಪಾಲ್ಗೊಂಡಿದ್ದರು.