ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರಜಾಪ್ರಭುತ್ವ ಭದ್ರಪಡಿಸೋಣ

Rashmi Kasaragodu
Updated On : 3 May 2013, 1:00 am

ಕನಕಪುರ: ಪ್ರಜಾಪ್ರಭುತ್ವದಲ್ಲಿ ಒಬ್ಬ ಮತದಾರನ ಅಜ್ಞಾನ ಪ್ರತಿಯೊಬ್ಬರ ಭದ್ರತೆಗೂ ಆತಂಕ, ಅಪಾಯ ತಂದೊಡ್ಡುತ್ತದೆ, ಎಂಬ ಜಾನ್ ಎಫ್. ಕೆನಡಿಯವರ ಮಾತುಗಳು ನಿತ್ಯ ಸತ್ಯವಾಗಿದ್ದು ಯಶಸ್ವೀ ಪ್ರಜಾಪ್ರಭುತ್ವ ಪ್ರತಿಯೊಬ್ಬ ಮತದಾರನ ವೈಯಕ್ತಿಕ ಶಕ್ತಿ ಸಾಮರ್ಥ್ಯಗಳನ್ನು ಅವಲಂಬಿಸಿದೆ ಎಂದು ಕನಕಪುರದ ಇಂಡಿಯನ್ ಸ್ಕೂಲ್ ಸಲಹಾ ಸಮಿತಿ ಅಧ್ಯಕ್ಷೆ  ಸುಹಾಸಿನಿ ಗೋವಿಂದರಾಜು ಹೇಳಿದ್ದಾರೆ.
ಮತದಾನದ ದಿನವನ್ನು ಸುಂದರ-ಸುಭದ್ರ-ಸಂಮೃದ್ಧ ನಾಡೊಂದನ್ನು ಕಟ್ಟುವ ಪ್ರತಿಜ್ಞಾವಿಧಿ ಹಾಗೂ ಪ್ರತಿಜ್ಞಾದಿನ ಎಂದು ಪರಿಭಾವಿಸಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಯೋಗ್ಯ ಅಭ್ಯರ್ಥಿಗಳನ್ನು ಚುನಾಯಿಸುವ ಮೂಲಕ ಸಂವಿಧಾನ ನೀಡಿರುವ ಮತದಾರ ಪ್ರಭುವಿನ ಪರಮೋಚ್ಚ ಅಧಿಕಾರವನ್ನು ಪಾವಿತ್ರತೆಯನ್ನು ಕಾಯ್ದುಕೊಂಡು ಪ್ರಜಾಪ್ರಭುತ್ವದ ಬೇರುಗಳನ್ನು ತಮಗಾಗಿ ಹಾಗೂ ತಮ್ಮ ಮುಂದಿನ ಪೀಳಿಗೆಗಾಗಿ ಮತ್ತಷ್ಟು ಹುರಿಗೊಳಿಸಿ ಭದ್ರಪಡಿಸೋಣ ಎಂದು ಸುಹಾಸಿನಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement