ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ವಿವಿ ಭೌತಶಾಸ್ತ್ರ ವಿಭಾಗ ಯುಜಿಸಿಯಿಂದ ಮಂಜೂರಾಗಿರುವ 'ಸ್ಟಡೀಸ್ ಆನ್ ರೆಡಾನ್ ಎಕ್ಸೇಲೇಷನ್ ರೇಟ್ ಅಂಡ್ ಇಟ್ಸ್ ಪಾಸಿಬಲ್ ಡಿಪೆಂಡೆನ್ಸ್ ಆನ್ ಜಿಯೋಫಿಸಿಕಲ್ ಅಂಡ್ ಮೆಟೀರಿಯೋಲಾಜಿಕಲ್ ಪ್ಯಾರಾಮೀಟರ್ಸ್ ಇನ್ ದಿ ಎನ್ವಿರಾನ್ಮೆಂಟ್ ಆಫ್ ಬೆಂಗಳೂರು' ಪ್ರಾಜೆಕ್ಟ್ನಲ್ಲಿ ಖಾಲಿ ಇರುವ ಒಂದು ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವರಿಗೆ ಅವಕಾಶ. ಮೂರು ವರ್ಷಗಳ ಅವಧಿಯ ಈ ಹುದ್ದೆಗೆ ಮೊದಲ ಎರಡು ವರ್ಷ ಮಾಸಿಕ ರು. 14 ಸಾವಿರ ಹಾಗೂ ಮೂರನೇ ವರ್ಷ ಮಾಸಿಕ ರು. 16 ಸಾವಿರ ವೇತನ ನೀಡಲಾಗುವುದು.