ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾತೃ ಪಕ್ಷಕ್ಕೆ ಮರಳಿದ ಗುರಪ್ಪ

Rashmi Kasaragodu
Updated On : 3 May 2013, 1:01 am

ಕ.ಪ್ರ.ವಾರ್ತೆ    ದೇವನಹಳ್ಳಿ    ಮೇ 2
ಬಿಜೆಪಿ ಜಿಲ್ಲಾ ಎಸ್ಸಿ ಘಟಕ ಅಧ್ಯಕ್ಷರಾಗಿದ್ದ ಎಸ್.ಗುರಪ್ಪರವರು ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.
ತಾವು ಬಿಜೆಪಿಯಲ್ಲಿದ್ದಾಗ ತಮ್ಮ ಮಾತಿಗೆ ವರಿಷ್ಠರು ಗೌರವ ನೀಡದೆ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದಿಂದ ಆಕಾಂಕ್ಷಿಗಳಾಗಿದ್ದ ಎಸ್.ಜಿ.ನಾರಾಯಣಸ್ವಾಮಿ ಹಾಗೂ ಡಿ.ಆರ್.ನಾರಾಯಣಸ್ವಾಮಿ ಇವರುಗಳಿಗೆ ಟಿಕೆಟ್ ನೀಡದೆ ಅಧಿಕಾರದ ಆಸೆಗಾಗಿ ಬಿಜೆಪಿಗೆ ಪಕ್ಷಾಂತರ ಮಾಡಿ ಬಂದ ಜಿ.ಚಂದ್ರಣ್ಣರವರಿಗೆ ಟಿಕೆಟ್ ನೀಡಿದ್ದಕ್ಕೆ ತಮಗೆ ಬೇಸರವಾಗಿ ಹಿರಿಯರಾದ ಸಿ.ನಾರಾಯಣಸ್ವಾಮಿರವರ ಮಾರ್ಗದರ್ಶನದಲ್ಲಿ ಬೆಳೆದ ನಾವು ಮತ್ತೆ ಜೆಡಿಎಸ್‌ಗೆ ಸೇರಿರುವುದಾಗಿ ತಿಳಿಸಿದರು.
ಜೆಡಿಎಸ್ ಅಭ್ಯರ್ಥಿಯಾಗಿರುವ ಪಿಳ್ಳಮುನಿಶಾಮಪ್ಪರವರ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಅವರು ಎಡಗೈ ಜನಾಂಗದಲ್ಲಿ ಜನಿಸಿದ್ದರೂ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿ ಎಲ್ಲ ಜನಾಂಗದವರನ್ನು ವಿಶ್ವಾಸಕ್ಕೆ ಪಡೆದಿದ್ದಾರೆ ಎಂದು ತಾಲೂಕು ಎಸ್ಸಿ ಘಟಕ ಅಧ್ಯಕ್ಷ ಈರಪ್ಪ ಹಾಗೂ ಬೂದಿಗೆರೆ ಶಂಕರ್‌ರವರು ತಿಳಿಸಿದರು.
ಚಂದ್ರಣ್ಣರವರು ಜೆಡಿಎಸ್‌ನಲ್ಲಿ ಸಾಕಷ್ಟು ಅಧಿಕಾರವನ್ನು ಅನುಭವಿಸಿ ಇದೇ ಪಕ್ಷದಲ್ಲಿದ್ದುಕೊಂಡು ಪಕ್ಷದ ಋಣ ತೀರಿಸಬೇಕಾಗಿತ್ತು ಎಂದು ಹರಳೂರು ದೇವರಾಜ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement