ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ
ಕನ್ನಡಪ್ರಭ ವಾರ್ತ್ಣೆ ಕನಕಪುರ ಮೇ 3
ಕನಕಪುರದ ಪೈಪ್ಲೈನ್ ರಸ್ತೆಯಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಲು ಕೋರಿ ಗುತ್ತಿಗೆದಾರ ದುರ್ಗಯ್ಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾದಯಾತ್ರೆ ಮೂಲಕ ಮನೆಮನೆಗಳಿಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ಕಾಂಗ್ರೆಸ್ ಮುಖಂಡರಾದ ಮಲ್ಲೇಶ್, ರಾಮದಾಸ್, ಗೋಪಿ, ರಾಮಚಂದ್ರ, ಗೌರಮ್ಮ, ರಮೇಶ್, ಉಮೇಶ್, ರಾಮಾನಾಯಕ್ ಪಾಲ್ಗೊಂಡಿದ್ದರು.