ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾರ್ಮಿಕರೇ ಕಡ್ಡಾಯ ಮತದಾನ ಮಾಡಿ: ದಯಾನಂದ ಮನವಿ

Rashmi Kasaragodu
Updated On : 4 May 2013, 12:44 pm

ಕ.ಪ್ರ. ವಾರ್ತೆ ಆನೇಕಲ್ಲು ಮೇ 3
ಆನೇಕಲ್ ತಾಲೂಕಿನ ವೀರಸಂದ್ರ, ಬೊಮ್ಮಸಂದ್ರ, ಅತ್ತಿಬೆಲೆ ಹಾಗೂ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಎಲ್ಲ ಕಾರ್ಮಿಕರು ಮೇ.5 ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಮೇಲ್ಮನೆ ವಿರೋಧಪಕ್ಷದ ಉಪ ನಾಯಕ ಬಿ.ಟಿ. ದಯಾನಂದ ಮನವಿ ಮಾಡಿದ್ದಾರೆ.
ತಾಲೂಕಿನ ಹೀಲಲಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವಣ್ಣ ಪರ ಮತಯಾಚನೆ ಮಾಡಿ ಮಾತನಾಡಿ,  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಯಾವುದೇ ರೀತಿಯ ಪ್ರೋತ್ಸಾಹ ಇಲ್ಲ. ಏಕ ಗವಾಕ್ಷಿ ಯೋಜನೆಯಡಿ ಆಗ ಬೇಕಾದ ಕೆಲಸ ಮಂಜೂರಾಗಬೇಕಿದ್ದು, ಅಮೂಲ್ಯ ಸಮಯ ಹಾಗೂ ವೆಚ್ಚ ಅಧಿಕವಾಗಲಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆ ಉತ್ತೇಜನ ನೀಡಬೇಕಾದ ಸರ್ಕಾರ ಬಹು ರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸು ಹಾಕುವುದಕ್ಕೆ ಆದ್ಯತೆ ನೀಡಿದೆ. ನಿರಂತರ ವಿದ್ಯುತ್, ಉತ್ತಮ ಸಂಪರ್ಕ ರಸ್ತೆ, ನೀರು ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದರು. ಈ ನಿಟ್ಟಿನಲ್ಲಿ ಸಮಸ್ತ ಕಾರ್ಮಿಕರು ಮತ ಚಲಾಯಿಸಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement