ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಕ್ಷೇತರ ಅಭ್ಯರ್ಥಿ ಮತಯಾಚನೆ

Rashmi Kasaragodu
Updated On : 4 May 2013, 12:51 pm

ನೆಲಮಂಗಲ: ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಶ್ರಮಿಸುವುದಾಗಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚೌಡಯ್ಯ ಹೇಳಿದರು. ಅವರು ಶುಕ್ರವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದ ಯಾತ್ರೆ ಮೂಲಕ ಕಾರ್ಯಕರ್ತರೊಂದಿಗೆ ತೆರಳಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡುತ್ತಾ ಕ್ಷೇತ್ರದಲ್ಲಿರುವ ರೈತರ ಅಭಿವೃದ್ಧಿಗಾಗಿ ಕೆರೆಗಳಿಗೆ ನೇತ್ರಾವತಿ, ಹೇಮಾವತಿ ನೀರು ತರಲು ಪ್ರಾಮಾಣಿಕ ಪ್ರಯತ್ನ  ಮಾಡುತ್ತೇವೆ. ಮೂಲಭೂತ ಸಮಸ್ಯೆಗಳಾದ ಒಳಚರಂಡಿ, ರಸ್ತೆ ಕಾಮಗಾರಿಗಳನ್ನು ಉತ್ತಮ ರೀತಿ ನಿರ್ಮಿಸಿ ಕ್ಷೇತ್ರವನ್ನು ಮಾದರಿ ಮಾಡಲು ತಾವುಗಳು ಮತ ನೀಡಬೇಕು ಎಂದು ಮನವಿ ಮಾಡಿದರು. ಪ್ರಚಾರದಲ್ಲಿ ಮುಖಂಡರಾದ ಬೈರಣ್ಣ, ಪುಷ್ಪ, ನಾರಾಯಣಪ್ಪ, ವೆಂಕಟಪ್ಪ, ತಿಮ್ಮಯ್ಯ ಸೇರಿದಂತೆ ಮತ್ತಿತರರು ಇದ್ದರು.
ಬಿಜೆಪಿಗೆ ನಾಯಕ ಸಮಾಜ ಬೆಂಬಲ
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ ವಾಲ್ಮೀಕಿ ಸಮುದಾಯದ ಬೆಂಬಲ ನೀಡುತ್ತಿರುವುದಾಗಿ ನಾಯಕ ಸಮುದಾಯದ ಮುಖಂಡ ಮುತ್ಸಂದ್ರ ಮುನಿರಾಜ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊಸಕೋಟೆ ಕ್ಷೇತ್ರದಲ್ಲಿ ವಾಲ್ಮೀಕಿ ಭವನ ಮತ್ತು ಈ ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿ ಸಮುದಾಯವನ್ನು ಅಭಿವೃದ್ಧಿಪಡಿಸುವಲ್ಲಿ ಇಚ್ಛಾಶಕ್ತಿ ತೋರಿರುವ ಸಚಿವ ಬಚ್ಚೇಗೌಡರನ್ನು ಈ ಬಾರಿಯೂ ಗೆಲ್ಲಿಸುವಲ್ಲಿ ನಾಯಕ ಸಮುದಾಯ ಶ್ರಮಿಸಲಿದೆ ಎಂದು ತಿಳಿಸಿದ್ದಾರೆ.
ಮತದಾನಕ್ಕೆ ಸಿದ್ಧತೆ
ನೆಲಮಂಗಲ: ಮೇ 5 ರಂದು ನಡೆಯಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ 243 ಮತದಾನ ಕೇಂದ್ರಗಳಿಗೆ ಅವಶ್ಯಕ ಸಿಬ್ಬಂದಿ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಅಮರೇಶ್ ತಿಳಿಸಿದ್ದಾರೆ. ಕ್ಷೇತ್ರದ 243 ಮತಗಟ್ಟೆಗಳಲ್ಲಿ ಒಟ್ಟಾರೆ 1152 ಸಿಬ್ಬಂದಿ ಹಾಗೂ 20 ಜನ ರೂಟ್ ಆಫೀಸರ್‌ಸ್ 138 ಜನ ಮೈಕ್ರೋ ಅಬ್ಸರ್ವರ್ಸ್ ಸೇರಿದಂತೆ ಅರೆ ಮಿಲಿಟರಿ, ಹೋಂಗಾರ್ಡ್, ಪೊಲೀಸರು ಸೇರಿ 2 ಸಾವಿರಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement