ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಕ್ಷೇತರ ಅಭ್ಯರ್ಥಿ ರೋಡ್‌ಶೋ...

Rashmi Kasaragodu
Updated On : 4 May 2013, 12:43 pm

ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ, ಮೇ 3
ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ. ಮುನೇಗೌಡ ಶುಕ್ರವಾರ ತಮ್ಮ ಶಕ್ತಿ ಪ್ರದರ್ಶನದ ಮೂಲಕ ಎದುರಾಳಿಗಳಿಗೆ ಸಮರ್ಥ ಪ್ರತಿಸ್ಪರ್ಧೆಯ ಎಚ್ಚರಿಕೆ ನೀಡಿದ್ದಾರೆ. ಹತ್ತಾರು ಆಟೋಗಳು ಮತ್ತು ಸಾವಿರಾರು ಜನ ಈ ಬೃಹತ್ ರೋಡ್‌ಶೋದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ರೋಡ್‌ಶೋ ವೇಳೆ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಬಿ. ಮುನೇಗೌಡ ಜನರ ಕಷ್ಟ-ಸುಖಕ್ಕೆ ಸ್ಪಂದಿಸಿದ್ದೇನೆ.
 ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು, ಎಲ್ಲ ಹಂತಗಳಲ್ಲೂ ಕೈಲಾದ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಜನಕ್ಕೆ ನಾನು ಮಾಡಿರುವ ಸೇವಾ ಕಾರ್ಯಗಳೇ ನನ್ನ ವಿಜಯದ ಮೆಟ್ಟಿಲು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜನ ಚುನಾಯಿಸಿದರೆ ಕ್ಷೇತ್ರದ ಸಂಪೂರ್ಣ ಬದಲಾವಣೆ, ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸವಿದೆ. ನೀರು, ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ರೋಡ್‌ಶೋದಲ್ಲಿ ಮುಖಂಡರಾದ ಪದ್ಮಾವತಿ ಮುನೇಗೌಡ, ಡಿ.ಸಿ. ಚೌಡರಾಜು, ನಾಗದೇನಹಳ್ಳಿ ಆನಂದ್ ಸೇರಿದಂತೆ ಅಪಾರ ಬೆಂಬಲಿಗರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement