ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಲುಜೋರು, ಕೊನೇ ದಿನದ ಕಸರತ್ತು

Rashmi Kasaragodu
Updated On : 4 May 2013, 12:14 pm

ಕನಕಪುರ: ಶಾಸಕ ಡಿ.ಕೆ.ಶಿವಕುಮಾರ್ ತಮ್ಮ ಶಕ್ತಿ, ಯುಕ್ತಿ ಬಳಸಿ ತಾಲೂಕಿಗೆ ನೂತನ ರೂಪ ನೀಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟರು.  ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಪರ ರೋಡ್ ಶೋ ಮೂಲಕ ಕನಕಪುರ ಟೌನ್, ಕೋಡಿಹಳ್ಳಿ,ದೊಡ್ಡಾಲಹಳ್ಳಿ, ಸಾತನೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.  ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಕಿವಿಯಲ್ಲಿ ಕೇಳುವ ಪ್ರಚಾರಕ್ಕಿಂತಲೂ ಕಣ್ಮುಂದೆ ಕಾಣುವ ಸಾಧನೆಗಳೇ ಮಹತ್ವ ವಾಗಿವೆ, ತಾವು ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಪರಿಗಣಿಸಿ ಜನತೆ ತಮ್ಮನ್ನು ಆಶೀರ್ವದಿಸಬೇಕೆಂದು ಕೋರಿದರು.  ಕಾಂಗ್ರೆಸ್ ಮುಖಂಡರಾದ ಮಾಜಿ ವಿಪಸದಸ್ಯ ಎಸ್.ರವಿ,ಪುರಸಭಾಧ್ಯಕ್ಷ ಆರ್.ಕೃಷ್ಣಮೂರ್ತಿ, ಜಿಪಂಸದಸ್ಯ ತಮ್ಮಣ್ಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ವಿಜಯದೇವ್, ಜಿಪಂ ಸದಸ್ಯ ವೆಂಕಟೇಶಯ್ಯ,ನಳಿನಾ ರವಿಶಂಕರ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement