ಸ್ಥಳೀಯರ ವಿರೋಧ ಕಸಾಯಿಖಾನೆ ರದ್ದು
ಕನಕಪುರ: ಹಾರೋಹಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸರ್ಕಾರ 41 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಹೊರಟ್ಟಿದ್ದ ನವೀನ ಯಾಂತ್ರೀಕೃತ ಕಸಾಯಿಖಾನೆ ಯೋಜನೆ ಸ್ಥಳೀಯರ ವಿರೋಧದಿಂದ ರದ್ದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟ ಆದೇಶ ನೀಡಿದ್ದಾರೆ. ಸ್ಥಳೀಯ ಮುಖಂಡ ಮಲ್ಲಪ್ಪ ಮಾತನಾಡಿ, ಪಕ್ಷಾತೀತವಾಗಿ ಎಲ್ಲರೂ ಕಸಾಯಿಖಾನೆ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ತಾವು ಅಧಿವೇಶನದೊಳಗೆ ಪ್ರವೇಶಿಸಿ ಕಸಾಯಿಖಾನೆ ರದ್ದತಿಗಾಗಿ ಆಗ್ರಹಿಸಿದ್ದು, ಕೊನೆಗೂ ಎಚ್ಚೆತ್ತ ಸರ್ಕಾರ ಅಂತಿಮವಾಗಿ ಕಸಾಯಿಖಾನೆ ಯೋಜನೆ ರದ್ದುಗೊಳಿಸಿದೆ. ಎಂದು ಮಲ್ಲಪ್ಪ ತಿಳಿಸಿದ್ದಾರೆ.ಮುಖಂಡರಾದ ತಾಪಂ ಸದಸ್ಯ ಪುರುಷೋತ್ತಮ್, ಗ್ರಾಪಂ ಅಧ್ಯಕ್ಷ ವೆಂಕಟರಾಜು, ಸವಿತಾಸುರೇಶ್, ಅಂಜನಪ್ಪ, ಕೋಟೆಕುಮಾರ್, ಹೆಚ್.ಸಿ.ಶೇಖರ್, ಎ.ಸಿ.ರಾಜು ಪಾಲ್ಗೊಂಡಿದ್ದರು.