ಮತದಾನ ಕೇಂದ್ರಕ್ಕೆ ತೆರಳಿದ ಅಧಿಕಾರಿಗಳು
ಕ.ಪ್ರ.ವಾರ್ತೆ ದೇವನಹಳ್ಳಿ ಮೇ 4-
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 260 ಮತಗಟ್ಟೆಗಳಲ್ಲಿ ಭಾನುವಾರ ಮತದಾನ ನಡೆಯಲಿದ್ದು ಶನಿವಾರ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ 1165 ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಯಂತ್ರ ಹಾಗೂ ಇತರ ಅಗತ್ಯ ಪರಿಕರಗಳನ್ನು ಚುನಾವಣಾ ಅಧಿಕಾರಿಗಳು ವಿತರಣೆ ಮಾಡಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 185157 ಮತದಾರರಿದ್ದು 260 ಮತಗಟ್ಟೆಗಳಲ್ಲಿ 112 ಸೂಕ್ಷ್ಮ ಹಾಗೂ 47 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಆರ್.ಸುಮ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗ ವಿಧಾನಸಭಾ ಚುನಾವಣೆ ಸಮಯ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆವಿಗೂ ನಿಗದಿ ಮಾಡಿತ್ತು.
ಆದರೆ ಮತದಾನದಲ್ಲಿ ಎಲ್ಲ ವರ್ಗದ ಜನರು ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೂ (ಒಂದು ಗಂಟೆ ವಿಸ್ತರಣೆ) ಮತದಾನ ಮಾಡಬಹುದಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.