'ಕೈ'ಯಾಳುಗಳಿಗೆ ಸೋಲಿನ ಭೀತಿ'
ರಾಮನಗರ: ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಪ್ರಮಾಣ ವಚನ ಸ್ವೀಕಾರದ ಕನಸು ಹೊತ್ತ ಕಾಂಗ್ರೆಸ್ನ ಪ್ರಮುಖರಿಗೆ ಈ ಬಾರಿ ಸೋಲಿನ ಭೀತಿ ಎದುರಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಅಚಲ ವಿಶ್ವಾಸವಿದೆ. ಅತಂತ್ರವಾದರೆ ಏನು ಮಾಡಬೇಕೆನ್ನುವುದನ್ನು ಆಗ ನೋಡೋಣ ಎಂದು ಮತದಾನದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ರಾಮನಗರ ಜಿಲ್ಲೆಯ ಎಲ್ಲ 4 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲವು ನಿಶ್ಚಿತ. ಹಣದಿಂದ ಜನರನ್ನು ಖರೀದಿಸಲು ಸಾಧ್ಯವಿಲ್ಲ. ಹಣಬಲಕ್ಕಿಂತ ಜನಬಲವೇ ಮೇಲೆನ್ನುವುದನ್ನು ಮತದಾರರು ಸಾಬೀತುಪಡಿಸಲಿದ್ದಾರೆ. ನನ್ನ ವಿರುದ್ಧ ಅಶೋಕ್ ಖೇಣಿ ಸುರಿದಿರುವ ಬಂಡವಾಳ ಕೆಲಸ ಮಾಡದು ಎಂದರು.