ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ: ಸಿಂಧ್ಯ

Rashmi Kasaragodu
Updated On : 6 May 2013, 12:02 pm

ಕನಕಪುರ: ಹಲ್ಲೆ ನಡೆಸುವುದು ಕ್ರೌರ್ಯದ ಸಂಕೇತ, ಕಾರ್ಯಕರ್ತರು ತಾಳ್ಮೆಯಿಂದ ವರ್ತಿಸಬೇಕು. ಅಧಿಕಾರಕ್ಕಾಗಿ ಯಾವುದೇ ಕೀಳು ಮಟ್ಟಕ್ಕಿಳಿಯಬಲ್ಲ ಜನರು ತಾವೇ ನಡೆಸಿದ ಕೃತ್ಯವನ್ನು ಮುಚ್ಚಿಹಾಕಲು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಇವೆಲ್ಲವೂ ಸರ್ವೇಸಾಧಾರಣವಾಗಿವೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಿಳಿಸಿದ್ದಾರೆ. ಅವರು ದೊಡ್ಡಮರಳವಾಡಿ ಗ್ರಾಮದಲ್ಲಿ ಮತದಾನ ನಡೆಸಿ ಮಾತನಾಡಿದರು. ಗಲಭೆಗಳ ಮೂಲಕ ಹಿಂಸಾಚಾರ ನಡೆಸಿ ಅಧಿಕಾರ ಪಡೆಯುವ ಪ್ರವೃತ್ತಿ ಸರಿಯಲ್ಲ. ಬೆಳೆಯುವ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ ಸಿಂಧ್ಯಾ ಕನಕಪುರ ಕ್ಷೇತ್ರದ ಜನರು ತಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ಖಚಿತವಾದ ನಂಬಿಕೆಯಿದೆ. ಅಂತೆಯೇ ರಾಜ್ಯದಲ್ಲಿ ಜೆಡಿಎಸ್ ಮೂಲಕ ಸ್ಥಿರ ಸರ್ಕಾರ ಸ್ಥಾಪನೆಯಾಗಬೇಕೆಂಬ ಆಶಯ ಜನರದ್ದು ಎಂದು ಹೇಳಿದ್ದಾರೆ. ಜೆಡಿಎಸ್ ಮುಖಂಡ ವಿಶಾಲಾಕ್ಷ, ಗಬ್ಬಾಡಿರವಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement