ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ವಿಧಾನಸಭಾ ಕ್ಷೇತ್ರ: ಶಾಂತ ಮತದಾನ

Rashmi Kasaragodu
Updated On : 6 May 2013, 12:05 pm

ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲ 260 ಮತಗಟ್ಟೆಗಳಲ್ಲಿ ಶಾಂತ ಮತದಾನ ನಡೆದಿದೆ. ತಾಲೂಕಿನ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ 103 ವರ್ಷದ ದೇವೀರಮ್ಮ ಅವರು ತಮ್ಮ ಮೊಮ್ಮಗ ಹನುಮಂತಪ್ಪ ಅವರೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಮತಚಲಾಯಿಸಿದರು. ಚನ್ನರಾಯಪಟ್ಟಣ ಗ್ರಾಮದಲ್ಲಿ ವಿಕಲಚೇತನ ಮುನಿಶಾಮಪ್ಪ ತಮ್ಮ ಮೊಮ್ಮಕ್ಕಳೊಂದಿಗೆ ತ್ರಿಚಕ್ರವಾಹನದಲ್ಲಿ ಆಗಮಿಸಿ ತಮ್ಮ ಮತ ಚಲಾಯಿಸಿದರು. ಚನ್ನರಾಯಪಟ್ಟಣ ಬಳಿಯ ದಿನ್ನೂರು ಮತಗಟ್ಟೆಯಲ್ಲಿ ಸಂಜೆ 4 ಗಂಟೆಗೆ ಶೇ. 95 ರಷ್ಟು ಮತದಾನವಾಗಿತ್ತು. ಬಹುತೇಕ ಗ್ರಾಮಗಳ ಮತಗಟ್ಟೆಗಳ ಬಳಿ ಯಾವುದೇ ರಾಜಕೀಯ ಪಕ್ಷಗಳ ಗುಂಪುಗಳು ಅಷ್ಟಾಗಿ ಕಾಣದೇ ಇದ್ದರೂ ದೇವನಹಳ್ಳಿ ಮತ್ತು ವಿಜಯಪುರಗಳ ಮತಗಟ್ಟೆಗಳ ಬಳಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಬೆಂಬಲಿಗರು ಹೆಚ್ಚಾಗಿ ಕಂಡುಬಂದರು. ಅತಿ ಸೂಕ್ಷ್ಮ ಮತಗಟ್ಟೆಗಳ ಬಳಿ ಅರೆ ಸೇನಾಪಡೆ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement