ನೀತಿ ಸಂಹಿತೆ ಉಲ್ಲಂಘನೆ: ಡಿಕೆಶಿ ವಿರುದ್ಧ ಕೇಸು
ರಾಮನಗರ: ಕನಕಪುರ ಕ್ಷೇತ್ರದ ಸ್ವಗ್ರಾಮ ದೊಡ್ಡಾಲಹಳ್ಳಿಯ ಮತಗಟ್ಟೆಯಲ್ಲಿ ಪತ್ನಿ ಉಷಾ ಅವರು ಮತ ಚಲಾಯಿಸುವ ಸಂದರ್ಭದಲ್ಲಿ ಮತಯಂತ್ರದ ಸಮೀಪವೇ ಇದ್ದ ಮಾಜಿ ಸಚಿವ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ವೀಡಿಯೋ ಚಿತ್ರೀಕರಣ ಸಹಿತ ವರದಿ ಆಧರಿಸಿ ಶಿವಕುಮಾರ್ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.