ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮನಗರ ಶೇ.82 ಮತದಾನ

Rashmi Kasaragodu
Updated On : 6 May 2013, 12:01 pm

ರಾಮನಗರ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.82 ರಷ್ಟು ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಮತದಾನದ ಪ್ರಮಾಣ ಹೆಚ್ಚಳವಾಗಿದೆ.  ಚನ್ನಪಟ್ಟಣದಲ್ಲಿ ಶೇ.81.50 ರಷ್ಟು ಮತದಾನ ನಡೆದಿದೆ. ರಾಮನಗರದಲ್ಲಿ 73, ಮಾಗಡಿಯಲ್ಲಿ 82.87 ಹಾಗೂ ಕನಕಪುರದಲ್ಲಿ ಶೇ.82ರಷ್ಟು ಮತದಾನ ನಡೆದಿದೆ.  ಕಳೆದ ಬಾರಿ ಜಿಲ್ಲೆಯಲ್ಲಿ ಶೇ.76ರಷ್ಟು ಮತದಾನ ನಡೆದಿತ್ತು. ಚನ್ನಪಟ್ಟಣದಲ್ಲಿ ಶೇ.78.11, ರಾಮನಗರದಲ್ಲಿ ಶೇ.72.15, ಮಾಗಡಿಯಲ್ಲಿ ಶೇ.77.35 ಹಾಗೂ ಕನಕಪುರದಲ್ಲಿ ಶೇ.76.38 ರಷ್ಟು ಮತಗಳು ಚಲಾವಣೆಯಾಗಿದ್ದವು.
ಮತದಾನದ ಏರುಗತಿ: ಜಿಲ್ಲಾದ್ಯಂತ ಬೆಳಗ್ಗೆ 7ಕ್ಕೆ ಶೇ. 8.75ರಷ್ಟು ಮತದಾನವಾಗಿತ್ತು. 11ರ ವೇಳೆಗೆ 16.71ಕ್ಕೆ ಏರಿತು. ಮಧ್ಯಾಹ್ನ 1ಕ್ಕೆ 40ರಷ್ಟು ಆಗಿದ್ದ ಮತದಾನವು 3ಕ್ಕೆ 57.33ರಷ್ಟು ಪ್ರಮಾಣಕ್ಕೆ ತಲುಪಿತ್ತು. ಸಂಜೆ 5ರ ವೇಳೆಗೆ ಮತದಾನದ ಪ್ರತಿಶತ ಪ್ರಮಾಣ ಶೇಕಡ 69.93 ಆಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement