ಹಕ್ಕು ಚಲಾಯಿಸಿದ 108 ವರ್ಷದ ವೃದ್ಧೆ
ಸೂಲಿಬೆಲೆ: ಇಲ್ಲಿಗೆ ಸಮೀಪದ ದೊಡ್ಡಕೊಲಿಗ ಗ್ರಾಮದಲ್ಲಿ 108 ವರ್ಷದ ವೃದ್ಧೆಯೊಬ್ಬಳು ಉತ್ಸಾಹದಿಂದ ಮತದಾನ ಮಾಡಿದಳು. ದೊಡ್ಡಕೂಲಿಗ ಗ್ರಾಮದ ಗೌಡ್ರ ಅಕ್ಕಯಮ್ಮ ತನ್ನ ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದಳು. ಕುರ್ಚಿಯಲ್ಲಿ ಮನೆಯಿಂದ ಈಕೆಯನ್ನು ಹೊತ್ತು ತಂದ ಮೊಮ್ಮಕ್ಕಳು ಗ್ರಾಮದ ಶಾಲೆಯಲ್ಲಿನ ಮತಗಟ್ಟೆಗೆ ಕರೆದುಕೊಂಡು ಹೋದರು.
ಈ ವೇಳೆ ನಾಲ್ವರನ್ನು ಒಳಬಿಡದ ಅಧಿಕಾರಿಗಳು ವೃದ್ಧೆಗೆ ಸಹಾಯಕವಾಗಲೆಂದು ಒಬ್ಬರನ್ನು ಮಾತ್ರ ಒಳಬಿಟ್ಟರು. ಉತ್ಸಾಹದಿಂದ ಮತ ಚಲಾಯಿಸಿದ ಮಹಿಳೆಯನ್ನು ನಂತರ ಎತ್ತಿಕೊಂಡು ಹೊರ ತರಲಾಯಿತು.