ಎರಡೂ ಕಿವಿ ಕೇಳಿಸದ ಸುಪ್ರೀತ ದ್ವಿತೀಯ ದರ್ಜೆ ಪಾಸ್
ದೇವನಹಳ್ಳಿ: ಇಲ್ಲಿನ ವಿಜಯಪುರ ರಸ್ತೆಯಲ್ಲಿರುವ ಎಸ್‌ಎಲ್‌ಎಸ್ ರೆಸಿಡೆನ್ಷಿಯಲ್ ಪ್ರೌಢಶಾಲೆಯ ಎರಡೂ ಕಿವಿ ಕೇಳಿಸದ ವಿದ್ಯಾರ್ಥಿನಿ ಎಂ.ಸುಪ್ರೀತ 2013ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ (ಶೇ.56) ಉತ್ತೀರ್ಣರಾಗಿದ್ದಾಳೆ ಎಂದು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಧನಂಜಯ ಅವರು ತಿಳಿಸಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ 22 ಮಕ್ಕಳು ಉತ್ತೀರ್ಣರಾಗಿ ಶೇ. ನೂರರಷ್ಟು ಫಲಿತಾಂಶ ದೊರೆತಿದ್ದು 5 ಮಂದಿ ಅತ್ಯುನ್ನತ, 11 ಮಂದಿ ಪ್ರಥಮ ದರ್ಜೆ, 5 ಮಂದಿ ದ್ವಿತೀಯ ಹಾಗೂ ಒಬ್ಬರು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ತಿಳಿಸಿದರು.