ಎಸ್ಸೆಸ್ಸೆಲ್ಸಿಯಲ್ಲಿ ತನುಷಾ ಬೆಂ.ಗ್ರಾ.ಜಿಲ್ಲೆಗೆ ಪ್ರಥಮ
ದೊಡ್ಡಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕಗಳನ್ನು ಗಳಿಸಿರುವ ದೇವನಹಳ್ಳಿಯ ಸ್ಟರ್ಲಿಂಗ್ ಆಂಗ್ಲ ಶಾಲೆಯ ವಿದ್ಯಾರ್ಥಿನಿ ಎಸ್.ಎನ್.ತನುಷಾ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಅಂಕಗಳಿಸಿ ಟಾಪ್ 8 ಸ್ಥಾನಗಳನ್ನು ಪಡೆದಿರುವ ವಿದ್ಯಾರ್ಥಿಗಳ ವಿವರ ಇಂತಿದೆ.
ಎಸ್.ಎನ್.ತನುಷಾ, ಸ್ಟರ್ಲಿಂಗ್ ಆಂಗ್ಲ ಶಾಲೆ, ದೇವನಹಳ್ಳಿ 616 ಅಂಕಗಳು
ಗೌರವ್, ಸೇಂಟ್ ಆನ್ಸ್ ಶಾಲೆ, ನೆಲಮಂಗಲ 610 ಅಂಕಗಳು
ಕೆ.ಎಸ್.ಮಂಜು ನಾಥ್, ಸೇಂಟ್ ಥಾಮಸ್ ಶಾಲೆ, ನೆಲಮಂಗಲ 607 ಅಂಕಗಳು
ಬಿ.ಎಸ್.ಪ್ರಾರ್ಥನ, ವಿಶಾಲ್ ಆಂಗ್ಲ ಶಾಲೆ, ನೆಲಮಂಗಲ 606 ಅಂಕಗಳು
ಜೆ.ಆರ್.ರಕ್ಷಿತ್, ಸ್ವಾಮಿ ವಿವೇಕಾನಂದ ಆಂಗ್ಲ ಶಾಲೆ, ದೊಡ್ಡಬಳ್ಳಾಪುರ. 605 ಅಂಕಗಳು
ಎನ್.ನವ್ಯಶ್ರೀ ಹೊಸಕೋಟೆ ಮತ್ತು ಅಕ್ಷತ್ ಕಚಿಂತಾಯ ನೆಲಮಂಗಲ 604 ಅಂಕಗಳು
ಪಿ.ಹಿಮಾಂಶು, ನೆಲಮಂಗಲ 602 ಅಂಕಗಳು
ಡಿ.ಎನ್.ದೀಪ ವಿಜಯಪುರ ಮತ್ತು ಸೌಂದರ್ಯ ದೇವನಹಳ್ಳಿ 600 ಅಂಕಗಳು