ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಕಪುರ ತಾಲೂಕಿನ ಹಲವಾರು ಶಾಲೆಗಳ ಶೇ.100 ಫಲಿತಾಂಶ

Rashmi Kasaragodu
Updated On : 7 May 2013, 12:37 pm


ಕ.ಪ್ರ. ವಾರ್ತೆ  ಕನಕಪುರ  ಮೇ 6
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಕನಕಪುರ ತಾಲೂಕಿನ ಹಲವಾರು ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮೆರೆದಿವೆ.
ಪ್ರಮುಖವಾಗಿ ರಸ್ತೆಜಕ್ಕಸಂದ್ರ ಗ್ರಾಮದ ಜೈನ್ ವಿದ್ಯಾನಿಕೇತನ ಶಾಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟಾರೆ 154 ವಿದ್ಯಾರ್ಥಿಗಳಲ್ಲಿ 28 ಮಂದಿ ಉನ್ನತ ಶ್ರೇಣಿ, 119 ಮಂದಿ ಪ್ರಥಮದರ್ಜೆ ಹಾಗೂ 7 ಮಂದಿ ದ್ವಿತೀಯದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜೇತರನ್ನು ಜೈನ್ ವಿವಿ ಉಪಕುಲಪತಿ ಚೆನ್‌ರಾಜ್ ಜೈನ್,ಪ್ರಾಂಶುಪಾಲ ಬಿ.ಪಿ. ಕಿಶೋರ್ ಅಭಿನಂದನೆ  ಸಲ್ಲಿಸಿದ್ದಾರೆ.
 ಕನಕಪುರ ಪಟ್ಟಣದ ಸೇಂಟ್ ಮೈಖೇಲ್ ಇಂಗ್ಲಿಷ್ ಸ್ಕೂಲ್ ತನ್ನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತಿದ್ದ 37 ವಿದ್ಯಾರ್ಥಿಗಳಲ್ಲಿ 4 ಮಂದಿ ಉನ್ನತ ಶ್ರೇಣಿ, 23 ಪ್ರಥಮದರ್ಜೆ, 6 ದ್ವಿತೀಯ ಹಾಗೂ 4 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜೇತರನ್ನು ಸಂಸ್ಥೆಯ ಅಧ್ಯಕ್ಷ, ಚಿತ್ರನಿರ್ಮಾಪಕ ಕನಕಪುರ ಆರ್.ಶ್ರೀನಿವಾಸ್, ಕಾರ್ಯದರ್ಶಿ ಅನಸೂಯಾ, ಉಪಾಧ್ಯಕ್ಷ ಭಾಸ್ಕರ್, ಪ್ರಾಂಶುಪಾಲರಾದ ಥೆರೇಸಮ್ಮ ಜೋಸೆಫ್ ಅಭಿನಂದಿಸಿದ್ದಾರೆ.
ಕನಕಪುರದ ಬ್ಲಾಸಂ ಪ್ರೌಢಶಾಲೆಯು ನಿರಂತರವಾಗಿ ಶೇ.100 ಫಲಿತಾಂಶವನ್ನು ದಾಖಲಿಸುತ್ತಿದ್ದು, ಈ ಬಾರಿ ಪರೀಕ್ಷೆಗೆ ಕುಳಿತ 43 ವಿದ್ಯಾರ್ಥಿಗಳಲ್ಲಿ 8 ಮಂದಿ ಉನ್ನತ ಶ್ರೇಣಿ, 30 ಮಂದಿ ಪ್ರಥಮ ದರ್ಜೆ, 3 ದ್ವಿತೀಯ ಹಾಗೂ 2 ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜೇತರನ್ನು ಪ್ರಾಂಶುಪಾಲರಾದ ಗಂಗಾಂಬಿಕಾ, ಡಾ.ಶಶಿಧರ್ ಸ್ಮಾರಕ ಟ್ರಸ್ಟ್‌ನ ವೆಂಕಟೇಶ್, ಕಾ.ಪ್ರಕಾಶ್, ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement