ದೇವರಾಜ ಅರಸು ಕಾಲೇಜಿಗೆ ಶೇ.80.25 ಫಲಿತಾಂಶ
ದೊಡ್ಡಬಳ್ಳಾಪುರ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಶ್ರೀದೇವರಾಜ ಅರಸು ಪದವಿ ಪೂರ್ವ ಕಾಲೇಜಿಗೆ ಶೇ.80.25 ಫಲಿತಾಂಶ ಲಭ್ಯವಾಗಿದೆ. ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 319 ವಿದ್ಯಾರ್ಥಿಗಳಲ್ಲಿ 256 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
22 ಮಂದಿ ಉನ್ನತ ಶ್ರೇಣಿ, 143 ಮಂದಿ ಪ್ರಥಮ ದರ್ಜೆ, 61 ಮಂದಿ ದ್ವಿತೀಯ ದರ್ಜೆ ಮತ್ತು 30 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದ ಪಿಸಿಎಂಬಿ ಸಂಯೋಜನೆಯಲ್ಲಿ 139 ವಿದ್ಯಾರ್ಥಿಗಳ ಪೈಕಿ 8 ಮಂದಿ ಉನ್ನತ ಶ್ರೇಣಿ, 65 ಮಂದಿ ಪ್ರಥಮ, 28 ದ್ವಿತೀಯ ಮತ್ತು 14 ಮಂದಿ ತೃತೀಯ, ಪಿಸಿಎಂಸಿಎಸ್ ಸಂಯೋಜನೆಯಲ್ಲಿ 67 ವಿದ್ಯಾರ್ಥಿಗಳ ಪೈಕಿ 3 ಮಂದಿ ಉನ್ನತ, 31 ಮಂದಿ ಪ್ರಥಮ, 13 ಮಂದಿ ದ್ವಿತೀಯ, 3 ಮಂದಿ ತೃತೀಯ, ವಾಣಿಜ್ಯ ವಿಭಾಗದಲ್ಲಿ 113 ಮಂದಿಯಲ್ಲಿ 11 ಮಂದಿ ಉನ್ನತ, 47 ಮಂದಿ ಪ್ರಥಮ, 20 ಮಂದಿ ದ್ವಿತೀಯ ಮತ್ತು 13 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಲಿ ಅಭಿನಂದಿಸಿದೆ ಎಂದು ಪ್ರಾಂಶುಪಾಲ ಕೆ.ಲವಕುಮಾರ್ ತಿಳಿಸಿದ್ದಾರೆ.