ಬಿಜೆಪಿ- ಕಾಂಗ್ರೆಸ್ ಗಲಾಟೆ: ಕಾರು ಭಸ್ಮ
ಕ.ಪ್ರ.ವಾರ್ತೆ ಸೂಲಿಬೆಲೆ ಮೇ 6
ಇಲ್ಲಿಗೆ ಸಮೀಪದ ಇ. ಮುತ್ಸಂದ್ರ ಗ್ರಾಮದಲ್ಲಿ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಎರಡು ಗುಂಪುಗಳಿಂದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಒಂದು ಕಾರು ಸುಟ್ಟು ಭಸ್ಮವಾಗಿದ್ದು, 26 ಮಂದಿಯನ್ನು ಸೂಲಿಬೆಲೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.
ಕಾರಿಗೆ ಬೆಂಕಿ: ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ನಡೆದ ಘರ್ಷಣಿಯನ್ನು ತಹಬದಿಗೆ ತಂದ ಪೊಲೀಸರ ಕಣ್ತಪ್ಪಿಸಿ ಮಧ್ಯ ರಾತ್ರಿ ವೇಳೆಗೆ ಮನೆ ಮುಂದೆ ನಿಲ್ಲಿಸಿದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಕಾರು ಸಂರ್ಪೂಣ ಸುಟ್ಟು ಭಸ್ಮವಾಗಿದೆ. ಘರ್ಷಣೆಗೆ ಕಾರಣರೆನ್ನಲಾದ ಕಾಂಗ್ರೆಸ್ನ 49 ಹಾಗೂ ಬಿಜೆಪಿ 23 ಜನರ ಮೇಲೆ ಎರಡು ಕಡೆಯವರು ನೀಡಿರುವ ದೂರು, ಪ್ರತಿದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.