ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರಸ್ವತಿ ಶಾಲೆಗೆ ಶೇ.100 ಫಲಿತಾಂಶ

Rashmi Kasaragodu
Updated On : 7 May 2013, 12:39 pm

ಕ.ಪ್ರ. ವಾರ್ತೆ  ದೊಡ್ಡಬಳ್ಳಾಪುರ  ಮೇ 6
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಸರಸ್ವತಿ ಶಾಲೆ ಶೇ.100 ಫಲಿತಾಂಶ ಪಡೆದಿದೆ. ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ 59 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಡಿ.ಎಸ್.ಜಗದೀಶ್ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ. ಶಾಲೆಯ 10 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 34 ಮಂದಿ ಪ್ರಥಮ ದರ್ಜೆ, 11 ಮಂದಿ ದ್ವಿತೀಯ ದರ್ಜೆ ಮತ್ತು 4 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಲಿ ಅಭಿನಂದಿಸಿದೆ ಎಂದು ಮುಖ್ಯಶಿಕ್ಷಕ  ಸಂಪತ್‌ಕುಮಾರ್ ತಿಳಿಸಿದ್ದಾರೆ.
ದೇವರಾಜ ಅರಸ್ ಶಾಲೆಗೆ ಶೇ.96 ಫಲಿತಾಂಶ: ಇಲ್ಲಿನ ಶ್ರೀದೇವರಾಜ ಅರಸ್ ಅಂತರ ರಾಷ್ಟ್ರೀಯ ವಸತಿ ಪ್ರೌಢಶಾಲೆ ಶೇ.96 ಫಲಿತಾಂಶ ಪಡೆದಿದೆ. ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 49 ವಿದ್ಯಾರ್ಥಿಗಳ ಪೈಕಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 21 ಮಂದಿ ಪ್ರಥಮ ದರ್ಜೆ, 17 ಮಂದಿ ದ್ವೀತಿಯ ಮತ್ತು 9 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ವರ್ಗ ಅಭಿನಂದಿಸಿದೆ ಎಂದು ಮುಖ್ಯಶಿಕ್ಷಕ ವಿಜಯಕುಮಾರ್ ತಿಳಿಸಿದ್ದಾರೆ.
ಮಹಾವೀರ್ ಶಾಲೆ ಉತ್ತಮ ಫಲಿತಾಂಶ : ಇಲ್ಲಿನ ಮಹಾವೀರ್ ಜೈನ್ ವಿದ್ಯಾಲಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.88 ಫಲಿತಾಂಶ ಲಭಿಸಿದೆ. 57 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ಪಿ.ಎಂ.ಸುಮನ್ 588 (ಶೇ.94.08) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಥಮ ಭಾಷೆ ಕನ್ನಡದಲ್ಲಿ 123 ಅಂಕಗಳನ್ನು ಪಡೆದಿರುವ ಈತ ಹಿಂದಿಯಲ್ಲಿ 99 ಅಂಕ ಪಡೆದಿದ್ದಾನೆ. ಎನ್.ಪುನೀತ್‌ಕುಮಾರ್ 578(ಶೇ.92.48), ಮನೋಹರ್‌ಗೌಡ 566(ಶೇ.90.56), ಆರ್.ಜಿ.ಸುರಭಿ-547(ಶೇ.87.52) ಅಂಕ ಪಡೆದಿದ್ದಾಳೆ. ಶಾಲೆಯಲ್ಲಿ 4 ಮಂದಿ ಉನ್ನತ ದರ್ಜೆ, 26 ಮಂದಿ ಪ್ರಥಮ ದರ್ಜೆ, 6 ಮಂದಿ ದ್ವಿತೀಯ ದರ್ಜೆ, 14 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement