ಹೃದಯಾಘಾತವಾಗಿದ್ದ ಪೊಲೀಸ್ ಪೇದೆ ಸಾವು
ನೆಲಮಂಗಲ: ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತವಾಗಿದ್ದ ಪೊಲೀಸ್ ಪೇದೆ ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಾಲೂಕಿನ ತ್ಯಾಮಗೊಂಡ್ಲುವಿನಲ್ಲಿ ಪೇದೆ ವೆಂಕಟರಾಮು(36) ಚುನಾವಣೆ ಕರ್ತವ್ಯನಿರ್ವಹಿಸಿತ್ತಿದ್ದಾಗ ಹೃದಯಘಾತವಾಗಿತ್ತು. ತಕ್ಷಣ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.