ಇಂದು 'ಬೆಂಗಳೂರು ಸಂತೆ'
ಬೆಂಗಳೂರು: ಬೆಂಗಳೂರು ಮೆಟ್ರೋ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಮೇ 8 ರಂದು ಸ್ವಾಮಿ ವಿವೇಕಾನಂದ ನಿಲ್ದಾಣದಲ್ಲಿ 'ಬೆಂಗಳೂರು ಸಂತೆ' ಏರ್ಪಡಿಸಿದೆ. ಗ್ರಾಮೀಣ ಕರಕುಶಲ ವಸ್ತುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 'ಬೆಂಗಳೂರು ಸಂತೆ' ಎಂಬ ವಸ್ತುಪ್ರದರ್ಶನ ಆಯೋಜಿಸಿದ್ದು, ಇದರಲ್ಲಿ 38 ಮಳಿಗೆಗಳಿದ್ದು, 70 ಗ್ರಾಮೀಣ ಕಲಾವಿದರು ಭಾಗವಹಿಸುವ ಮೂಲಕ ವಸ್ತುಗಳ ಮಾರಾಟ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.