ಎಂ.ಎಚ್. ಕಾಲೇಜಿಗೆ ಶೇಕಡಾ 96
2013ನೇ ಮಾರ್ಚ್ನಲ್ಲಿ ಪ ಪೂಶಿಕ್ಷಣ ಇಲಾಖೆಯಿಂದ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಂ.ಎಚ್. ಕಾಲೇಜಿಗೆ ಶೇಕಡಾ 96ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 65 ವಿದ್ಯಾರ್ಥಿಗಳ ಪೈಕಿ 3 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನುಳಿದಂತೆ 30 ಪ್ರಥಮ, 20 ದ್ವಿತೀಯ ಹಾಗೂ 12 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀಹರ್ಷ 548, ಕೆ.ಹೇಮಾವತಿ 523, ಕೆ.ಮಮತ 518 ಅಂಕಗಳನ್ನು ಪಡೆದು ಕಾಲೇಜಿನ ಮೊದಲ 3 ಸ್ಥಾನ ಪಡೆದಿದ್ದಾರೆ.