ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಕಪುರ ತಾ. ಹಲವಾರು ಕಾಲೇಜುಗಳ ಉತ್ತಮ ಸಾಧನೆ

Rashmi Kasaragodu
Updated On : 8 May 2013, 12:28 pm

ಕ.ಪ್ರ. ವಾರ್ತೆ  ಕನಕಪುರ  ಮೇ 7
ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕನಕಪುರ ತಾಲೂಕಿನ ಹಲವಾರು ಕಾಲೇಜುಗಳು ಉತ್ತಮ ಸಾಧನೆ ಮೆರೆದಿವೆ.
ರಸ್ತೆ ಜಕ್ಕಸಂದ್ರ ಗ್ರಾಮದ ಜೈನ್ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತ 213 ವಿದ್ಯಾರ್ಥಿಗಳಲ್ಲಿ 182 ಮಂದಿ ತೇರ್ಗಡೆಹೊಂದಿದ್ದು ಶೇ.86 ಫಲಿತಾಂಶದೊಂದಿಗೆ 13 ಉನ್ನತಶ್ರೇಣಿ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಪ್ರಜ್ವಲ್ ಅರಸ್ 543 ಅಂಕಗಳೊಂದಿಗೆ ಶೇ.90.50 ವಾಣಿಜ್ಯ ವಿಭಾಗದಲ್ಲಿ ಕು.ಆಶ್ರಿತಾ 547 ಅಂಕಗಳೊಂದಿಗೆ ಶೇ.91.80 ಫಲಿತಾಂಶ ದಾಖಲಿಸಿದ್ದಾರೆ. ಜೈನ್‌ವಿದ್ಯಾನಿಕೇತನ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಉನ್ನತಶ್ರೇಣಿಯಲ್ಲಿ 4, ಪ್ರಥಮದರ್ಜೆ 58, ದ್ವಿತೀಯ ದರ್ಜೆ 23, ತೃತೀಯ ಶ್ರೇಣಿಯಲ್ಲಿ 4 ಮಂದಿ ತೇರ್ಗಡೆಯಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಉನ್ನತಶ್ರೇಣಿಯಲ್ಲಿ 9, ಪ್ರಥಮ ದರ್ಜೆಯಲ್ಲಿ 56, ದ್ವಿತೀಯದರ್ಜೆಯಲ್ಲಿ 22, ತೃತೀಯ ದರ್ಜೆಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದಾರೆ, ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಜೈನ್‌ವಿವಿ ಕುಲಪತಿ ಚೆನ್‌ರಾಜ್ ಜೈನ್,ಜೈನ್‌ಸಮೂಹ ಶಿಕ್ಷಣಸಂಸ್ಥೆಗಳ ನಿರ್ದೇಶಕ ಬಿ.ಪಿ.ಕಿಶೋರ್, ಪ್ರಾಂಶುಪಾಲರಾದ ಡಾ.ವತ್ಸಲಾ, ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.  ಕನಕಪುರದ ಗ್ರಾಮವಿದ್ಯಾ ಪ್ರಚಾರಕ ಸಂಘದ ರೂರಲ್ ಪಿಯು ಕಾಲೇಜಿನಲ್ಲಿ ಒಟ್ಟಾರೆ 1099 ಮಂದಿ ಪರೀಕ್ಷೆಗೆ ಕುಳಿತಿದ್ದು 591 ಮಂದಿ ತೇರ್ಗಡೆಯಾಗಿದ್ದು ಶೇ.63.67 ಫಲಿತಾಂಶ ದಾಖಲಾಗಿದೆ. ರೂರಲ್‌ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆರ್.ಕೆ.ನಾರಾಯಣ್ 576 ಅಂಕಗಳೊಂದಿಗೆ ಶೇ.96 ಫಲಿತಾಂಶದೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಸಾಧನೆ ಮೆರೆದಿದ್ದಾನೆ.
14 ಮಂದಿ ಉನ್ನತ ಶ್ರೇಣಿ: ರೂರಲ್‌ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 14 ಮಂದಿ ಉನ್ನತಶ್ರೇಣಿ,56 ಪ್ರಥಮದರ್ಜೆ,57 ದ್ವಿತೀಯದರ್ಜೆ, 25 ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 2 ಉನ್ನತಶ್ರೇಣಿ, 66 ಪ್ರಥಮ ದರ್ಜೆ,69 ದ್ವಿತೀಯ ದರ್ಜೆ, 64 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 10 ಉನ್ನತಶ್ರೇಣಿ, 85 ಪ್ರಥಮ ದರ್ಜೆ, 95 ದ್ವಿತೀಯದರ್ಜೆ,48 ತೃತೀಯದರ್ಜೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.  ಇದೇ ಸಂಸ್ಥೆ ಸಾತನೂರು ಗ್ರಾಮದಲ್ಲಿ ನಡೆಸುತ್ತಿರುವ ಗ್ರಾಮಾಂತರ ಪಿಯು ಕಾಲೇಜಿನಲ್ಲಿ ಶೇ.84.2 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 3 ಉನ್ನತಶ್ರೇಣಿ, 10 ಪ್ರಥಮ, 4 ದ್ವಿತೀಯ, ಕಲಾವಿಭಾಗದಲ್ಲಿ 1 ಉನ್ನತಶ್ರೇಣಿ, 26 ಪ್ರಥಮ, 9 ದ್ವಿತೀಯ,3 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲ ರಾಮಚಂದ್ರೇಗೌಡ ತಿಳಿಸಿದ್ದಾರೆ. ವಿಜೇತರನ್ನು ಗ್ರಾಮವಿದ್ಯಾ ಪ್ರಚಾರಕಸಂಘದ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ,ಕಾರ್ಯದರ್ಶಿ ಸಿ.ರಮೇಶ್, ನಿರ್ದೇಶಕ ಎಚ್.ಕೆ. ಹೊಂಬಾಳೇಗೌಡ, ಪ್ರಾಂಶುಪಾಲ ದೇವರಾಜ್ ಅಭಿನಂದಿಸಿದ್ದಾರೆ. ಕನಕಪುರದ ಸರ್ಕಾರಿ ಎಕ್ಸ್‌ಮುನಿಸಿಪಲ್ ಪಪೂ ಕಾಲೇಜಿನ ಕಲಾವಿಭಾಗದಲ್ಲಿ ಶೇ.69, ವಾಣಿಜ್ಯ ವಿಭಾಗದಲ್ಲಿ ಶೇ.65 ಫಲಿತಾಂಶ ದಾಖಲಾಗಿದೆ. ಒಟ್ಟಾರೆ 46 ವಿದ್ಯಾರ್ಥಿಗಳು ಪ್ರಥಮ ದರ್ಜೆ, 51 ದ್ವಿತೀಯ ದರ್ಜೆ, 48 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement