ಗಲಭೆಗಳ ಬಗ್ಗೆ ಪ್ರತ್ಯೇಕ ದೂರು
ಕನಕಪುರ: ಕನಕಪುರ ತಾಲೂಕಿನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಗಲಭೆಗಳ ಬಗ್ಗೆ ವಿವಿಧ ಪ್ರಕರಣಗಳಲ್ಲಿ ಕನಕಪುರ ಹಾಗೂ ಕೋಡಿಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಶಾಸಕ ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ.ಸುರೇಶ್, ಜಿಪಂ ಸದಸ್ಯ ಇಕ್ಬಾಲ್ ಹುಸೇನ್, ಲೋಕೇಶ್ ಮತ್ತಿತರ 20 ಜನರ ಮೇಲೆ ಜೆಡಿಎಸ್ ಮುಖಂಡ ಎಲ್.ರಾಜು ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ, ಹಲಸೂರು ಗ್ರಾಮಕ್ಕೆ ತೆರಳುತ್ತಿದ್ದ ತಮ್ಮ ಇನೋವಾ ವಾಹನದ ಮೇಲೆ ಕಲ್ಲುಗಳನ್ನು ಬೀರಿ, ಸೈಜುಗಲ್ಲುಗಳನ್ನು ಎತ್ತಿಹಾಕಿ ಸಂಪೂರ್ಣ ಜಖಂಗೊಳಿಸಿದ್ದಾರೆ. ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಐಪಿಸಿ ಕಲಂ ರೀತ್ಯಾ ಹತ್ಯಾಯತ್ನ, ಜಾತಿನಿಂದನೆ ಕೇಸುಗಳನ್ನು ದಾಖಲಿಸಿದ್ದಾರೆ.