ಡಿ.ಕೆ.ಶಿವಕುಮಾರ್, ಪತ್ನಿ ಮತ ಅಸಿಂಧು
ಬೆಂಗಳೂರು: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಸಂದರ್ಭದಲ್ಲಿ ಪತ್ನಿ ಜತೆ ತೆರಳಿ ಮತದಾನ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಪತ್ನಿಯ ಮತವನ್ನು ಅಸಿಂಧುಗೊಳಿಸಿದೆ.
ಮತದಾನ ಸಂದರ್ಭದಲ್ಲಿ ಗೌಪ್ಯತೆ ಕಾಪಾಡಬೇಕೆಂಬ ನಿಯಮವಿದ್ದರೂ ಶಿವಕುಮಾರ್ ತಮ್ಮ ಪತ್ನಿ ಜತೆ ತೆರಳಿ ಒಟ್ಟಾಗಿ ಮತ ಚಲಾಯಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಜತೆ ಚರ್ಚೆ ನಡೆಸಿರುವ ರಾಜ್ಯ ಚುನಾವಣಾ ಅಧಿಕಾರಿಗಳು ಶಿವಕುಮಾರ್ ಮತ್ತು ಅವರ ಪತ್ನಿ ಮತವನ್ನು ಅಸಿಂಧುಗೊಳಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ರಾಮನಗರ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.