ಪದವಿ ಪೂರ್ವ ಕಾಲೇಜು: ಶೇ. 97 ರಷ್ಟು ಫಲಿತಾಂಶ
ವಿಜಯಪುರ: ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2013ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಯಲ್ಲಿ ಹಾಜರಿದ್ದ 160 ವಿದ್ಯಾರ್ಥಿಗಳ ಪೈಕಿ 155 ಜನ ಉತೀರ್ಣರಾಗಿದ್ದಾರೆ.
ಅತ್ಯುತ್ತಮ ಶ್ರೇಣಿಯಲ್ಲಿ 11ಮಂದಿ, ಪ್ರಥಮ ಶ್ರೇಣಿಯಲ್ಲಿ 97 ಮಂದಿ, ದ್ವಿತೀಯ ಶ್ರೇಣಿಯಲ್ಲಿ 40 ಮಂದಿ ಉತೀರ್ಣರಾಗಿದ್ದಾರೆ. ಕಾಲೇಜಿಗೆ ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಕಾಲೇಜು ಅಡಳಿತ ವರ್ಗದ ಎಂ. ಸತೀಶ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.