ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ 17ನೇ ಸ್ಥಾನ

Rashmi Kasaragodu
Updated On : 8 May 2013, 12:27 pm

ಕ.ಪ್ರ. ವಾರ್ತೆ  ರಾಮನಗರ  ಮೇ 7
2012-13ನೇ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ 17ನೇ ಸ್ಥಾನ ಲಭಿಸಿದ್ದು, ಶೇ.57.39ರಷ್ಟು ಫಲಿತಾಂಶ ದೊರೆತಿದೆ.
ಪರೀಕ್ಷೆಗೆ ಹಾಜರಾಗಿದ್ದ 9486 ವಿದ್ಯಾರ್ಥಿಗಳಲ್ಲಿ 5444 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ಕಲಾ ವಿಭಾಗದಲ್ಲಿ 4385 ವಿದ್ಯಾರ್ಥಿಗಳಲ್ಲಿ 2191 (ಶೇ.49.97), ವಾಣಿಜ್ಯ ವಿಭಾಗದಲ್ಲಿ 3080 ವಿದ್ಯಾರ್ಥಿಗಳಲ್ಲಿ 2131(ಶೇ.69.22), ವಿಜ್ಞಾನ ವಿಭಾಗದಲ್ಲಿ 2021 ವಿದ್ಯಾರ್ಥಿಗಳಲ್ಲಿ 1121 ವಿದ್ಯಾರ್ಥಿಗಳು (ಶೇ 55.47) ತೇರ್ಗಡೆ ಹೊಂದಿದ್ದಾರೆ.
ಈ ಬಾರಿ 7507 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆಗೆ ಕುಳಿತಿದ್ದು, ಶೇ 65.94ರ ತೇರ್ಗಡೆಯೊಂದಿಗೆ 4950 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಕಲಾ ವಿಭಾಗದ 3333 ವಿದ್ಯಾರ್ಥಿಗಳಲ್ಲಿ 1928(ಶೇ.57.85), ವಾಣಿಜ್ಯ ವಿಭಾಗದ 2605 ವಿದ್ಯಾರ್ಥಿಗಳಲ್ಲಿ 1988(ಶೇ.76.31) ಹಾಗೂ ವಿಜ್ಞಾನ ವಿಭಾಗದ 1569 ವಿದ್ಯಾರ್ಥಿಗಳಲ್ಲಿ 1034(ಶೇ.65.90) ವಿದ್ಯಾರ್ಥಿಗಳು ಸೇರಿದ್ದಾರೆ.  
ಪರೀಕ್ಷೆ ಬರೆದಿದ್ದ 4615 ವಿದ್ಯಾರ್ಥಿಗಳ ಪೈಕಿ 2254(ಶೇ.48.84), 4821 ವಿದ್ಯಾರ್ಥಿನಿಯರಲ್ಲಿ 3190(ಶೇ.65.49) ಮಂದಿ ತೇರ್ಗಡೆ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement