ಬಾಲಕಿ ಅತ್ಯಾಚಾರ ಆರೋಪಿ ಬಂಧನ
ಕ.ಪ್ರ.ವಾರ್ತೆ ಆಳಂದ ಮೇ 7
ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವಕನೊಬ್ಬನನ್ನು ಸ್ಥಳೀಯ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ಎಸ್.ಬಿ. ಸಾಂಬಾ, ಸಿಪಿಐ ರವಿನಾಥ ಮಾರ್ಗದರ್ಶನದಲ್ಲಿ ಪಿಎಸ್ಐ ರವಿಕುಮಾರ ಹಾಗೂ ಪಿಸಿ ಚಂದ್ರಶೇಖರ, ಗುರುನಾಥ ದಾಳಿ ನಡೆಸಿ ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ. ತಾಲೂಕಿನ ಕಮ್ಸರ್ ನಾಯಕ ತಾಂಡಾದ ನಿವಾಸಿ ಛಹರಿಶ್ಚಂದ್ರ ತಂದೆ ಸಾಲು ಪವಾರ(30) ಎಂಬಾತನು ಅದೇ ತಾಂಡಾದ ತನ್ನ 10 ವರ್ಷದ ಸಂಬಂಧಿಕರ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಆರೋಪಿ ತಲೆಮೆರೆಸಿಕೊಂಡಿದ್ದನು.
ಹಿನ್ನೆಲೆ: ಏ.10ರಂದು ನನ್ನ ತಾಯಿ ಉಸ್ಮಾನಾಬಾದ್ ಜೈಲಿನಲ್ಲಿರುವ ತಮ್ಮ ತಂದೆಯನ್ನು ಭೇಟಿಯಾಗಲು ಬೆಳಗ್ಗೆ 9 ಗಂಟೆಗೆ ಹೋಗಿದ್ದಳು. ನಾನು ನನ್ನ ತಮ್ಮಂದಿರೊಂದಿಗೆ ಮನೆಯಲ್ಲಿದ್ದೆವು. ಅಂದು ರಾತ್ರಿ 9 ಗಂಟೆ ಸುಮಾರಿಗೆ ನಮ್ಮ ತಾಂಡಾದ ಹಾಗೂ ಮಾಮನಾದ ಹರಿಶ್ವಂದ್ರ ಸಾಲು ಪವಾರ ನಮ್ಮ ಮನೆಗೆ ಬಂದಾಗ ನಾನು ಹತ್ತಿರದ ಮನೆಯ ಗುಲಾಬ ತಂದೆ ಗಂಗು ಚವ್ಹಾಣ ಅವರ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ನನ್ನನ್ನು ಕರೆದು ಖಾರದ ಪುಡಿ ಕೇಳಿದನು. ನಾನು ಹೊರಗೆ ಬರುತ್ತಿದ್ದಂತೆ ನನಗೆ ಅವರ ಮನೆಗೆ ಕರೆದುಕೊಂಡು ಹೋಗಿ ಮನೆಯ ಬಾಗಿಲು ಮುಚ್ಚಿ ತನ್ನ ಮನಬಂದಂತೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದಳು.