ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೆಂ.ಗ್ರಾ.ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ ತನುಷಾಗೆ ಶಾಸಕರ ಅಭಿನಂದನೆ

Rashmi Kasaragodu
Updated On : 8 May 2013, 12:27 pm

ಕ.ಪ್ರ. ವಾರ್ತೆ  ದೇವನಹಳ್ಳಿ   ಮೇ 7
2012-13 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದೇವನಹಳ್ಲಿಯ ಸ್ಟರ್ಲಿಂಗ್ ಶಾಲೆಯ ವಿದ್ಯಾರ್ಥಿನಿ ಎಸ್.ಎನ್.ತನುಷ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಶಾಸಕ ವೆಂಕಟಸ್ವಾಮಿ ಅವರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಚಂದ್ರಶೇಖರ್  ತನುಷ ಅವರ ಮನೆಗೆ ಹೋಗಿ ಅಭಿನಂದನೆ ಸಲ್ಲಿಸಿದರು.
ತನುಷ ತಾಯಿ ಎಂ.ಎಸ್.ಹೇಮಲತ, ತಂದೆ ನಂದೀಶಯ್ಯ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಮಗಳು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಸ್ಟರ್ಲಿಂಗ್ ಶಾಲೆಯ ಅಧ್ಯಾಪಕ ವರ್ಗಕಾರಣರು ಎಂದು ನಂದೀಶಯ್ಯ ತಿಳಿಸಿದರು. ಕನ್ನಡ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಶೇ.ನೂರಷ್ಟು ಅಂಕಗಳನ್ನು ಹಾಗೂ ಕನ್ನಡದಲ್ಲಿ 99 ಅಂಕಗಳನ್ನು ತನುಷ ಗಳಿಸಿದ್ದಾಳೆ ಎಂದು ತಂದೆ ನಂದೀಶಯ್ಯ ತಿಳಿಸಿ ಯಾವುದೇ ಟ್ಯೂಷನ್‌ಗೆ ಕಳುಹಿಸುತ್ತಿರಲಿಲ್ಲ ಎಂದರು.
ಕೇವಲ ನಗರ ಪ್ರದೇಶದ ಶಾಲೆಗಳಲ್ಲಿ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಮಾತು ಸರಿಯಲ್ಲ, ಗ್ರಾಮಾಂತರ ಪ್ರದೇಶದ ಶಾಲೆಗಳು ಸಹ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತವೆ ಎಂಬುದಕ್ಕೆ ಈ ವಿದ್ಯಾರ್ಥಿನಿಯೇ ಸಾಕ್ಷಿ ಎಂದರು.
ತನುಷಾ ಉನ್ನತ ವ್ಯಾಸಂಗ ಪಡೆಯಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಎನ್.ರಘು ಹಾಗೂ ಸ್ಟರ್ಲಿಂಗ್ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಶಾಂತ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement