ಬೆಂಕಿ ಅನಾಹುತ: 5 ಲಕ್ಷ ನಷ್ಟ
ಕ.ಪ್ರ. ವಾರ್ತೆ ಹೊಸಕೋಟೆ: ಮೇ 7
ಪಟ್ಟಣದ ಕೆ.ಇ.ಬಿ.ವೃತ್ತದ ಬಳಿ ಬೆಳಗಿನ ಜಾವ ವಿದ್ಯುತ್ ಶಾರ್ಟ್ಸರ್ಕಿಟ್ನಿಂದ ಸುಮಾರು ಐದು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
ಈ ಅಂಗಡಿಗಳಲ್ಲಿ ಹಣ್ಣು ಮತ್ತು ಇತರೆ ಮಾರಾಟ ಮಳಿಗೆಗಳಾಗಿದ್ದು ಬೆಂಕಿ ಅವಘಡದಿಂದ ಅಂಗಡಿಯಲ್ಲಿದ್ದ ಸಾಮಾನು ಸರಂಜಾಮುಗಳು ಸುಟ್ಟು ಕರಕಲಾಗಿವೆ. ಅದರ ಅಂದಾಜು ಮೌಲ್ಯ 5 ಲಕ್ಷ ರು.ಗಳಾಗಿರುತ್ತವೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಅಂಗಡಿಯಲ್ಲಿ ಬೆಂಕಿ ಕಾಣಿಸಿದ ತಕ್ಷಣ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೆ ಬಂದು ಕಾರ್ಯಾಚರಣೆ ನಡೆಸಿ ಇನ್ನು ಹೆಚ್ಚಿನ ಅನಾಹುತವನ್ನು ತಡೆದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.